ಕ್ರಿಕೆಟ್

ಚೆಂಡು ವಿರೂಪಗೊಳಿಸಿದ ಪ್ರಕರಣ: ನಿಷೇಧದ ಅವಧಿ ಕಡಿತಗೊಳಿಸುವಂತೆ ಆಟಗಾರರ ಒಕ್ಕೂಟದ ಮನವಿ

Srinivasamurthy VN
ಸಿಡ್ನಿ: ಭಾರಿ ಚರ್ಚೆಗೆ ಕಾರಣವಾಗಿದ್ದ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧ ಶಿಕ್ಷೆ ಎದುರಿಸುತ್ತಿರುವ ಆಟಗಾರರ ನಿಷೇಧದ ಅವಧಿಯನ್ನು ಕಡಿತಗೊಳಿಸುವಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರ ಒಕ್ಕೂಟ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದೆ.
ಪ್ರಕರಣ ಸಂಬಂಧ ಒಂದು ವರ್ಷ ನಿಷೇಧ ಎದುರಿಸುತ್ತಿರುವ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್, ಮಾಜಿ ಉಪನಾಯಕ ಡೇವಿಡ್ ವಾರ್ನರ್ ಮತ್ತು 9 ತಿಂಗಳ ನಿಷೇಧಕ್ಕೆ ಗುರಿಯಾಗಿರುವ ಬ್ಯಾಂಕ್ರಾಫ್ಟ್ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸುವಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರ ಒಕ್ಕೂಟ (ಎಸಿಎ) ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿಕೊಂಡಿದೆ. ಆಸಿಸ್ ಕ್ರಿಕೆಟಿಗರಿಗೆ ನೀಡಿರುವ ಶಿಕ್ಷೆ ಪ್ರಮಾಣ ಅಕ್ರಮ ಎಂದು ಎಸಿಎ ತನ್ನ ಮನವಿಯಲ್ಲಿ ಹೇಳಿದ್ದು, ಶಿಕ್ಷೆ ಪ್ರಮಾಣವನ್ನು ಮತ್ತೊಮ್ಮೆ ಪರಿಶೀಲಿಸಿ ಕಡಿತಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದೆ. 
ಅಲ್ಲದೆ ಕ್ರಿಕೆಟ್ ನಿಂದ ಸಂಪೂರ್ಣ ನಿಷೇಧ ಹೇರುವ ಬದಲು ದೇಶೀಯ ಕ್ರಿಕೆಟ್ ನಲ್ಲಿ ಆಡಲು ಆಟಗಾರರಿಗೆ ಅವಕಾಶ ಮಾಡಿಕೊಡಬೇಕು. ಬಾಲ್ ಟ್ಯಾಂಪರಿಂಗ್ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಸಾಕಷ್ಚು ಬಾರಿ ಆಟಗಾರರು ಬಾಲ್ ಟ್ಯಾಂಪರಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು. ಆಟಗಾರರಿಗೆ ವಿಧಿಸಲಾಗಿರುವ ಶಿಕ್ಷೆ ಪ್ರಶ್ನೆ ಮಾಡಲು ನಮಗೆ ಮಂಗಳವಾರದವರೆಗೂ ಕಾಲಾವಕಾಶವಿತ್ತು. ಹೀಗಾಗಿ ಇಂದು ನಮ್ಮ ಅರ್ಜಿ ಸಲ್ಲಿಕೆ ಮಾಡಿದ್ದೇವೆ.
ಈಗಾಗಲೇ ಆಟಗಾರರಾರು ತಮ್ಮ ಕೃತ್ಯಕ್ಕೆ ಸಂಬಂಧಿಸಿದಂತೆ ದೇಶದ ಪ್ರಜೆಗಳ ವಿರೋಧ ಎದುರಿಸುತ್ತಿದ್ದು. ಇದೇ ಆಟಗಾರರಿಗೆ ಅತ್ಯಂತ ದೊಡ್ಡ ಶಿಕ್ಷೆಯಾಗಿದೆ ಎಂದು ಎಸಿಎ ಅಧ್ಯಕ್ಷ ಗ್ರೇಗ್ ಡೈಯರ್ ಮನವಿ ಮಾಡಿಕೊಂಡಿದ್ದಾರೆ. 
SCROLL FOR NEXT