ನಿತೀಶ್ ರಾಣಾ ಬ್ಯಾಟಿಂಗ್ ಶೈಲಿ
ಕೋಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ರಾಯಲ್ ಛಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಮೊದಲಿಗೆ ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್ ಮೆಕಲಮ್(43), ವಿರಾಟ್ ಕೊಹ್ಲಿ(31), ಎಬಿ ಡಿವಿಲಿಯರ್ಸ್(44) ಹಾಗೂ ಮಂದೀಪ್ ಸಿಂಗ್ (37) ಉತ್ತಮ ರನ್ ಪೇರಿಸಿದ್ದರು.
ಕೋಲ್ಕತ್ತಾದ ಬೌಲರ್ ಗಳಾದ ವಿನಯ್ ಕುಮಾರ್, ನಿತೀಶ್ ರಾಣ ತಲಾ ಎರಡು ವಿಕೆಟ್ ಕಬಳಿಸಿದರೆ ಪಿಯೂಷ್ ಚಾವ್ಲ, ಮಿಚೆಲ್ ಜಾನ್ಸನ್ ಹಾಗೂ ಸುನೀಲ್ ನರೇನ್ ತಾವು ಒಂದೊಂದು ವಿಕೆಟ್ ಪಡೆದರು.
ಬೆಂಗಳೂರು ತಂಡ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 18.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸುನೀಲ್ ನರೇನ್ (50), ನಿತೀಶ್ ರಾಣ(34) ಹಾಗೂ ದಿನೇಶ್ ಕಾರ್ತಿಕ್(35*) ಅವರುಗಳು ಕೋಲ್ಕಾತ್ತಾ ತಂಡದ ಪರವಾಗಿ ಉತ್ತಮ ಪ್ರದರ್ಶ್ನ ನಿಡಿದ್ದಾರೆ.
ಆರ್ಸಿಬಿ ಬೌಲರ್ ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದು ಮಿಂಚಿದರೆ ಉಮೇಶ್ ಯಾದವ್ 2 ವಿಕೆಟ್ ಉರುಳಿಸಲು ಸಮರ್ಥರಾದರು. ವಾಷಿಂಗ್ಟ್ನ್ ಸುಂದರ್ 1 ವಿಕೆಟ್ ಪಡೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 176/7 (20.0 ಓವರ್)
ಕೋಲ್ಕತ್ತಾ ನೈಟ್ ರಈಡರ್ಸ್ 177/6 (18.5 ಓವರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics