ನವದೆಹಲಿ: ನಿಮ್ಮ ಸೌಂದರ್ಯ ವರ್ಣಿಸಲು ಅಸಾಧ್ಯ.. ನಿಮ್ಮ ಜೊತೆ ಊಟ ಮಾಡಬೇಕು ಎಂದು ಆಹ್ವಾನ ಕೊಟ್ಟ ವ್ಯಕ್ತಿಯೋರ್ವನಿಗೆ ಭಾರತ ತಂಡದ ಖ್ಯಾತ ಕ್ರಿಕೆಟಿಗನ ಪತ್ನಿ ತಲೆ ತಿರುಗುವಂತೆ ಉತ್ತರ ನೀಡಿದ್ದಾರೆ.
ಬಹುಶಃ ಕ್ರಿಕೆಟ್ ನಲ್ಲಿ ಮಂದಿರಾ ಬೇಡಿ ಬಳಿಕ ನಿರೂಪಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಮಾಯಂತಿ ಲ್ಯಾಂಗರ್ ಬಿನ್ನಿ.. ಸಾಕಷ್ಟು ಮಂದಿಗೆ ಈಕೆ ಭಾರತ ತಂಡದ ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಎಂದು ತಿಳಿದಿರಲಿಲ್ಲ. ಇತ್ತೀಚೆಗೆ ಐಪಿಎಲ್ ಸೀಸನ್ 11 ಆರಂಭವಾದ ಬಳಿಕ ಮಾಯಂತಿ ಬಿನ್ನಿ ಪತ್ನಿ ಎಂಬ ವಿಚಾರ ಹೆಚ್ಚು ಪ್ರಚಾರ ಪಡೆಯಿತು.
ತಮ್ಮ ಸೌಂದರ್ಯ ಹಾಗೂ ಆಕರ್ಷಕ ನಿರೂಪಣೆಯಿಂದಲೇ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿರುವ ಮಾಯಂತಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುವ ಪ್ರಯತ್ನ ಮಾಡಿ ವ್ಯಕ್ತಿಯೋರ್ವ ಪೇಚಿಗೆ ಸಿಲುಕಿದ್ದಾನೆ.
ಟೀಮ್ ಇಂಡಿಯಾದ ಆಲ್ ರೌಂಡರ್ ಕರ್ನಾಟಕದ ಸ್ಟುವರ್ಟ್ ಬಿನ್ನಿ ಅವರ ಮಡದಿಯಾಗಿರುವ ಮಾಯಂತಿ ಅವರ ಸೌಂದರ್ಯಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹಾಗೆಯೇ ಇವರನ್ನು ಕಾಲೆಳೆಯುವವರೂ ಸೋಷಿಯಲ್ ಮೀಡಿಯಾಗಳಲ್ಲಿ ಇದ್ದಾರೆ. ಹೀಗೆ ಕಾಲೆಳೆಯಲು ಬಂದ ಕಿಡಿಗೇಡಿಯೊಬ್ಬನಿಗೆ ಮಾಯಂತಿ ಮುಖಕ್ಕೆ ಹೊಡೆದ ಹಾಗೆ ಉತ್ತರ ಕೊಟ್ಟಿದ್ದಾರೆ.
ಮಾಯಂತಿ ಅವರನ್ನು ಉದ್ದೇಶಿಸಿ ಫಹಾದ್ ಎಂಬಾತ, 'ನಿಮ್ಮನ್ನು ಕಂಡಾಗಲೆಲ್ಲಾ ನನಗೆ ಐಪಿಎಲ್ ಪಂದ್ಯಗಳನ್ನು ನೋಡಲು ಮನಸ್ಸೇ ಆಗುವುದಿಲ್ಲ. ನೀವು ಕ್ಲಾಸ್ ಮತ್ತು ಅಸಾಧಾರಣ ವ್ಯಕ್ತಿತ್ವದ ಪರಿಪೂರ್ಣ ಮಿಶ್ರಣವಿದ್ದಂತೆ. ನಾನು ನಿಮ್ಮನ್ನು ಒಮ್ಮೆ ಡಿನ್ನರ್’ಗೆ ಕರೆದೊಯ್ಯಬೇಕೆಂಬ ಆಸೆಯಿದೆ. ನೀವು ಎಷ್ಟೊಂದು ಸುಂದರವಾಗಿದ್ದೀರಿ ಎಂಬುದನ್ನು ಹೋಗಳಲು ನನ್ನಲ್ಲಿ ಪದಗಳೇ ಇಲ್ಲ, ಎಂದು ಟ್ವೀಟ್ ಮಾಡಿದ್ದ.
ಈ ಟ್ವೀಟ್ ಅವನದೇ ಧಾಟಿಯಲ್ಲಿ ಉತ್ತರ ನೀಡಿರುವ ಮಾಯಂತಿ, 'ಥ್ಯಾಂಕ್ಯೂ.. ನಾನು ಮತ್ತು ನನ್ನ ಗಂಡ ಜೊತೆಯಾಗಿ ನಿಮ್ಮ ಜೊತೆ ಡಿನ್ನರ್ ಗೆ ಬರುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ತಮ್ಮ ಕಾಲೆಳೆಯಲು ಬಂದ ಈ ವ್ಯಕ್ತಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ಮಾಯಂತಿ ಲ್ಯಾಂಗರ್ ಅವರ ಖಡಕ್ ಉತ್ತರಕ್ಕೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos