ವಿರಾಟ್ ಕೊಹ್ಲಿ 
ಕ್ರಿಕೆಟ್

ಬೆಂಗಳೂರು ಪಿಚ್ ಬಗ್ಗೆ ನಮ್ಮ ಲೆಕ್ಕಾಚಾರ ತಪ್ಪಾಯಿತು: ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್ ಗಳ ಸ್ವರ್ಗವಾದ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಸರಿಯಾಗಿ ಅರ್ಧೈಸಿಕೊಳ್ಳುವಲ್ಲಿ....

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್ ಗಳ ಸ್ವರ್ಗವಾದ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಸರಿಯಾಗಿ ಅರ್ಧೈಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾನುವಾರ ನಡೆದ ರಾಜಸ್ಥಾನ ವಿರುದ್ಧದ ಪಂದ್ಯ ಸೋತ ಬಳಿಕ ಅವರು ಹೇಳಿದ್ದಾರೆ.
ರಾಜಸ್ಥಾನ ನೀಡಿದ್ದ 218 ರನ್​ಗಳ ಗುರಿ ಬೆನ್ನತ್ತಿದ್ದ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ 6 ವಿಕೆಟ್​ ನಷ್ಟಕ್ಕೆ 198 ರನ್​ ಗಳನ್ನಷ್ಟೇ ಗಳಿಸಲು ಶಕ್ಯವಾಗಿತ್ತು.
"ಬೆಂಗಳೂರಿನದು ನಿಧಾನ ಗತಿಯ ಪಿಚ್ ನ ಕ್ರೀಡಾಂಗಣವೆಂದು ನಾವು ಭಾವಿಸಿದ್ದು ತಪ್ಪಾಗಿತ್ತು. ಪಂದ್ಯದ ಮೊದಲ ಭಾಗದಲ್ಲಿ ರನ್ ಸುರಿಮಳೆಯಾದದ್ದನ್ನು ನೋಡಿ ನಮಗೆ ಅಚ್ಚರಿಯಾಗಿತ್ತು. ಎದುರಾಳಿಗಳಿಂದ ಇಷ್ಟು ಮೊತ್ತದ ರನ್ ಕಲೆಹಾಕಲಾಗುವುದೆಂದು ನಾವು ಭಾವಿಸಿರಲಿಲ್ಲ, ಇದು ಅವರ ಟಿ20 " ಸೋಲಿನ ಬಳಿಕ ಕೊಹ್ಲಿ ಹೇಳಿದರು.
ಇಂಗ್ಲೆಂಡ್ ನ ಆಲ್ ರೌಂಡರ್ ಕ್ರಿಸ್ ವೊಕೆಕ್ಸ್ ಅವರ ಆಟವನ್ನು ಸಮರ್ಥಿಸಿಕೊಂಡ ಕೊಹ್ಲಿ "ಕ್ರಿಸ್ ವೊಕೆಕ್ಸ್ ಬೌಲಿಂಗ್ ಮಾಡಲು ಹೊರಟಾಗಲೆಲ್ಲಾ ನಮ್ಮ ವಿಕೆಟ್ ಕಿತ್ತಿದ್ದಾರೆ ಇದಕ್ಕೆಂದೇ ಅವರನ್ನು ಹರಾಜಿನ ವೇಳೆ ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ"
"ಇದು ಅವರ ದಿನವಾಗಿತ್ತು. ಎಲ್ಲಾ ಎರಡೂ ಇನ್ನಿಂಗ್ಸ್ ಸೇರಿ ಸುಮಾರು 400 ರನ್ ಗಳಿಸುವುದು ಅಷ್ಟೇನೋ ಸುಲಭವಲ್ಲ. ಬೌಲರ್ ಗಳ ಬಗ್ಗೆ ಬಹಳ ಕಠಿಣ ತೀರ್ಮಾನ ತೆಗೆದುಕೊಳ್ಳಲು ನಾನು ಬಯಸಲಾರೆ" ನಾಯಕ ಕೊಹ್ಲಿ ಹೇಳಿದ್ದಾರೆ.
"ಬೌಲರ್ ಗಳ ಮೇಲೆ ಒತ್ತಡ ಕಡಿಮೆ ಮಾಡಲು ಪವನ್ ನೇಗಿ ಅವರನ್ನು ಹೆಚ್ಚುವರಿ ಬೌಲರ್ ಆಗಿ ಇಳಿಸಲು ಯೋಜಿಸಿದ್ದೆ. ಆದರೆ ಎದುರಾಳಿ ತಂಡದವರು ನೇಗಿ ಅವರನ್ನೂ ಸೇರಿದಂತೆ ನಮ್ಮ ಎಲ್ಲಾ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು." ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೊಹ್ಲಿ ಹೇಳಿದ್ದಾರೆ.
"ಕೆಲವೊಂದಷ್ಟು ವಿಚಾರಗಳನ್ನು ಮಾತ್ರ ನಾವು ಯೋಜಿಸಬಹುದು, ಆದರೆ ಎಲ್ಲವೂ ನಾವು ಯೋಜಿಸಿದಂತೆ ನಡೆಯುವುದಿಲ. ಹೀಗಾಗಿ ನಡೆದಿರುವುದನ್ನು ನಾವು ಒಪ್ಪಿಕೊಳ್ಳಬೇಕು. ಸಧ್ಯ ತಂಡದ ಸದಸ್ಯರು ನಾವೆಲ್ಲಿ ತಪ್ಪಿದ್ದೇವೆ ಎನ್ನುವುದನ್ನು ತಿಳಿದು ಸರಿಪಡಿಸಿಕೊಳ್ಳಬೇಕು.ಇಷ್ಟಾಗಿ 200 ರನ್ ಗಳ ಗುರಿ ಯಾವಾಗಲೂ ಕಠಿಣವಾಗಿರಲಿದೆ.
ಇದು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಅತ್ಯುತ್ತಮ ಪ್ರಯತ್ನವಾಗಿತ್ತು ಏಕೆಂದರೆ ಉನ್ನತ-ಕ್ರಮಾಂಕದ ಬ್ಯಾಟ್ಸ್ ಮನ್ ಗಳು ವೈಫಲ್ಯ ಕಂಡಾಗ ಇವರ ಆಟ ತಂಡಕ್ಕೆ ವಿಶ್ವಾಸ ನೀಡುತ್ತದೆ.ಮನ್ ದೀಪ್ ಸಿಂಗ್ ಹಾಗು ವಾಷಿಂಗ್ ಟನ್ ಸುಂದರ್ ಅವರ ಜತೆಯಾಟದ ಕುರಿತಂತೆ ಕೊಹ್ಲಿ ಹೇಳಿದರು.
ತಂಡವು ಸರ್ಫ್ ರಾಜ್ ಖಾನ್ ಅವರ ಆಕ್ರಮಣಕಾರಿ ಆಟದಿಂದ ಅವಂಚಿತವಾಗಿದೆಯೆ ಎಂದು ಕೇಳಿದ್ದ ಪ್ರಶ್ನೆಗೆ  "ನಾವು ನಿರ್ದಿಷ್ಟ ಪಂದ್ಯವೊಂದರಲ್ಲಿ ಆಟಗಾರರ ಪರ್ಫಾರ್ಮೆನ್ಸ್ ಪ್ರಕಾರ ಅವರ ಆಯ್ಕೆ ಮಾಡುವುದಿಲ್ಲ. ಪ್ರತಿ ಹಂತದಲ್ಲಿ ತಂಡದ ಸಮತೋಲನ ಕಾಪಾಡಿಕೊಳ್ಳುತ್ತೇವೆ" ಎಂದರು.
 45-ಬಾಲ್ ಗೆ 92 ರನ್ ಗಳಿಸಿದ್ದ ಸಂಜು ಸಮ್ಸಾನ್ ಅವರನ್ನು ಪ್ರಶಂಸಿಸಿದ ಕೊಹ್ಲಿ ಇಂತಹಾ ಆಟಗಾರರಿಂದ  ರಾಷ್ಟ್ರೀಯ ತಂಡವು ಭವಿಷ್ಯದಲ್ಲಿ ಮಹತ್ವದ ಆಟಗಾರರನ್ನು ಹೊಂದುವುದು ಸಾಧ್ಯವಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!