ಕ್ರಿಕೆಟ್

ಐಪಿಎಲ್ 2018: ಆರ್ ಸಿಬಿಗೆ ಗೆಲ್ಲಲು 214 ರನ್ ಗಳ ಬೃಹತ್ ಗುರಿ ನೀಡಿದ ಮುಂಬೈ

Srinivasamurthy VN
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಗೆಲ್ಲಲು ಮುಂಬೈ ತಂಡ 214 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ನಾಯಕ ರೋಹಿತ್ ಶರ್ಮಾ (94 ರನ್) ಮತ್ತು ಆರಂಭಿಕ ಆಟಗಾರ ಎವಿನ್ ಲೂಯಿಸ್ (65 ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬೆಂಗಳೂರು ತಂಡದ ವಿರುದ್ಧ 214 ರನ್ ಗಳ  ಬೃಹತ್ ಮೊತ್ತ ಪೇರಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಶೂನ್ಯಕ್ಕೆ ಔಟ್ ಆಗುವ ಮೂಲಕ ತಂಡ ತೀವ್ರ ಒತ್ತಡಕ್ಕೆ ಸಿಲುಕಿತ್ತು. 
ಈ ಹಂತದಲ್ಲಿ ಆರಂಭಿಕ ಆಟಗಾರ ಎವಿನ್ ಲೂಯಿಸ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಜೊತೆಗೂಡಿದ ಎವಿನ್ ಸಿಕ್ಸರ್, ಬೌಂಡರಿಗಳ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಬಳಿಕ ತಂಡದ ಮೊತ್ತ 108 ರನ್ ಗಳಾಗಿದ್ದಾಗೆ 65 ರನ್ ಗಳಿಸಿದ್ದ ಎವಿನ್ ಲೂಯಿಸ್ ಆ್ಯಂಡರ್ಸನ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ದರ್ಬಾರ್ ಮುಂದುವರೆಯಿತು. ಸಿಕ್ಸರ್ ಬೌಂಡರಿ ಮೂಲಕ ತಂಡದ ರನ್ ವೇಗ ಹೆಚ್ಚಿಸಿಗ ರೋಹಿತ್ ಶರ್ಮಾ ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 
ಬಳಿಕ ಅಂತಿಮ ಓವರ್ ನಲ್ಲಿ 94 ರನ್ ಗಳಿಸಿದ್ದ ರೋಹಿತ್ ನಿರ್ಗಮಿಸಿದರು. ಅಂತಿಮವಾಗಿ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಆ ಮೂಲಕ ಬೆಂಗಳೂರು ತಂಡಕ್ಕೆ ಗೆಲ್ಲಲು 214 ರನ್ ಗಳ ಬೃಹತ್ ಗುರಿ ನೀಡಿದರು.
ಬೆಂಗಳೂರು ಪರ ಉಮೇಶ್ ಯಾದವ್ ಮತ್ತು ಕೋರಿ ಆಂಡರ್ಸನ್ ತಲಾ 2 ವಿಕೆಟ್ ಮತ್ತು ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದರು.
SCROLL FOR NEXT