ಕ್ರಿಕೆಟ್

ಐಪಿಎಲ್ 2018: ಪುಣೆ ಕ್ರಿಕೆಟ್ ಮೈದಾನಕ್ಕೆ ನೀರು ಬಳಕೆ ಮಾಡದಂತೆ ಮಹಾ 'ಹೈ' ಆದೇಶ

Srinivasamurthy VN
ಮುಂಬೈ: ಮಹಾರಾಷ್ಟ್ರ ಕ್ರಿಕೆಟ್ ಮಂಡಳಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ದು, ಪುಣೆ ಕ್ರಿಕೆಟ್ ಮೈದಾನಕ್ಕೆ ನೀರು ಬಳಕೆ ಮಾಡದಂತೆ ಮಹಾರಾಷ್ಟ್ರ ಹೈ ಕೋರ್ಟ್ ಆದೇಶ ನೀಡಿದೆ.
ಈ ಹಿಂದೆ ಕಾವೇರಿ ವಿಚಾರವಾಗಿ ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ನಡೆದಿದ್ದ ದಾಂಧಲೆ ನಡೆದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಜ ತವರಿನ ಪಂದ್ಯಗಳನ್ನು ಪುಣೆಗೆ ರವಾನೆ ಮಾಡಲಾಗಿತ್ತು. ಹೀಗಾಗಿ ಪುಣೆಯ ಕ್ರಿಕೆಟ್ ಮೈದಾನವನ್ನು ಐಪಿಎಲ್ ಗೆ ಬಳಕೆ ಮಾಡಿಕೊಳ್ಳಲು ಬಿಸಿಸಿಐ ನಿರ್ಧರಿಸಿತ್ತು. ಆದರೀಗ ಬಿಸಿಸಿಐ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿ ನಿರ್ಧಾರಕ್ಕೆ ಬಾಂಬೇ ಹೈಕೋರ್ಟ್ ತಡೆ ನೀಡಿದ್ದು,ಮುಂದಿನ ಆದೇಶದವರೆಗೂ ಪುಣೆಯ ಮೈದಾನಕ್ಕೆ ಪವನ ಡ್ಯಾಂ ನ ನೀರನ್ನು ಬಳಕೆ ಮಾಡದಂತೆ ಆದೇಶ ನೀಡಿದೆ.
ಪುಣೆ ಮೈದಾನಕ್ಕೆ ಪವನ ಡ್ಯಾಂನ ನೀರು ಬಳಕೆ ಮಾಡುವ ಸಂಬಂಧ ಮಹಾರಾಷ್ಟ್ರ ಕ್ರಿಕೆಟ್ ಮಂಡಳಿ ಹಾಗೂ ಮಹಾರಾಷ್ಚ್ರ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದ ದೋಷಪೂರಿತವಾಗಿದ್ದು, ನೀರನ್ನು ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂಬ ಅಂಶ ಇದರಲ್ಲಿ ಸೇರಿದೆ. ಹೀಗಾಗಿ ಒಪ್ಪಂದಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಲೋಕಸತ್ತಾ ಎಂಬ ಎನ್ ಜಿಒ ಅರ್ಜಿ ಸಲ್ಲಿಕೆ ಮಾಡಿತ್ತು. 
ಈ ಸಂಬಂಧ ಇಂದು ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ನ ನ್ಯಾಯಮೂರ್ತಿ ಎಎಸ್ ಒಕಾ ಮತ್ತು ಆರ್ ಐ ಚಾಗ್ಲಾ ಅವರ ನೇತೃತ್ವದ ದ್ವಿಸದಸ್ಯ ಪೀಠ ತನ್ನ ಮುಂದಿನ ಆದೇಶದವರೆಗೂ ಪುಣೆ ಮೈದಾನಕ್ಕೆ ಡ್ಯಾಂ ನೀರು ಬಳಕೆ ಮಾಡದಂತೆ ಆದೇಶ ನೀಡಿದೆ. 
SCROLL FOR NEXT