ಕ್ರಿಕೆಟ್

ಪ್ರಧಾನಿ ಮೋದಿ-ಅಸಾರಾಂ ವಿಡಿಯೋ ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾದ ಐಸಿಸಿ

Vishwanath S
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತನ್ನ ಅಧಿಕೃತ ಟ್ವೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರೊಂದಿಗಿರುವ ವಿಡಿಯೋವನ್ನು ಟ್ವೀಟ್ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದೆ. 
ಇಂದು ಅತ್ಯಾಚಾರ ಪ್ರಕರಣ ಸಂಬಂಧ ಅಸಾರಾಂ ಬಾಪು ಅವರ ತೀರ್ಪು ಹಿನ್ನೆಲೆಯಲ್ಲಿ ಐಸಿಸಿ ಈ ಟ್ವೀಟ್ ಮಾಡಿದ್ದು ತಕ್ಷಣವೇ ಎಚ್ಚೆತ್ತುಕೊಂಡ ಐಸಿಸಿ ಕ್ಷಮೆಯಾಚಿಸಿ ಟ್ವೀಟ್ ಅನ್ನು ಡಿಲೀಟ್ ಮಾಡಿ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ. 
2013ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಸಾರಾಂ ಬಾಪು ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ದೋಷಿ ಎಂಬುದು ಸಾಬೀತಾದ ಬೆನ್ನಲ್ಲೇ ಐಸಿಸಿಯಿಂದ ಇಂತಹದೊಂದು ಟ್ವೀಟ್ ಪ್ರಕಟಣೆಯಾಗಿತ್ತು. ಐಸಿಸಿಯ ಈ ಕಾರ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ) ತೀವ್ರವಾಗಿ ಖಂಡಿಸಿದ್ದು ಇದು ತೀರಾ ದುರದೃಷ್ಟಕರ ಸಂಗತಿ ಎಂದಿದೆ.
SCROLL FOR NEXT