ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

ಐಪಿಎಲ್: ಧೋನಿ, ರಾಯುಡು ಅಬ್ಬರದ ಆಟ, ಆರ್ ಸಿಬಿ ವಿರುದ್ಧ ಸಿಎಸ್ ಕೆ ಗೆ 5 ವಿಕೆಟ್ ಜಯ

ಮಹೇಂದ್ರ ಸಿಂಗ್​ ಧೋನಿ ಹಾಗೂ ಅಂಬಾಟಿ ರಾಯುಡು ಅವರ ​ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ರಾಯಲ್...

ಬೆಂಗಳೂರು: ಮಹೇಂದ್ರ ಸಿಂಗ್​ ಧೋನಿ ಹಾಗೂ  ಅಂಬಾಟಿ ರಾಯುಡು ಅವರ ​ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್  ಐದು ವಿಕೆಟುಗಳ  ಭರ್ಜರಿ ಗೆಲುವು ಸಾಧಿಸಿದೆ.
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆರ್ ​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 205 ರನ್​ಗಳಿಸುವ ಮೂಲಕ ಸಿಎಸ್ ಕೆ ಗೆಲುವಿಗೆ 206 ರನ್​ಗಳ ಬೃಹತ್​ ಗುರಿಯನ್ನು ನೀಡಿತು.
ಬೃಹತ್ ಮೊತ್ತ ಬೆನ್ನತ್ತಿದೆ ಸಿಎಸ್ ಕೆ ಆರಂಭದಲ್ಲೇ ಶೇನ್ ವಾಟ್ಸನ್ (7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಬಳಿಕ ಬಂದ ಅಂಬಾಟಿ ರಾಯುಡು(82) ಹಾಗೂ ಮಹೇಂದ್ರ ಸಿಂಗ್​ ಧೋನಿ(70*) ಅವರ ಆಕರ್ಷಕ ಅರ್ಧ ಶತಕಗಳ ನೆರವಿನೊಂದಿಗೆ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು.
ಆರ್ ಸಿಬಿ ಪರ ಎಬಿ ಡಿವಿಲಿಯರ್ಸ್​(68), ಕ್ವಿಂಟನ್​ ಡಿ ಕಾಕ್​(53) ಹಾಗೂ ಮಂದೀಪ್​ ಸಿಂಗ್​(32) ರನ್ ​ಗಳ ಉತ್ತಮ ಕಾಣಿಕೆ ನೀಡಿದರು.
ಆರ್ ​ಸಿಬಿ ಪರ ಯಜುವೇಂದ್ರ ಚಹಾಲ್​ ಎರಡು ವಿಕೆಟ್​ ಪಡೆದರೆ, ಪವನ್​ ನೇಗಿ ಹಾಗೂ ಉಮೇಶ್​ ಯಾದವ್​ ತಲಾ ಒಂದೊಂದು ವಿಕೆಟ್​ ಪಡೆದರು. ಅಂಬಾಟಿ ರಾಯುಡು ರನೌಟ್​ ಆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!