ಕ್ರಿಕೆಟ್

ಅಂಬಟಿ ರಾಯುಡು, 'ದಿ ಸೂಪರ್ ಕಿಂಗ್ ಆಫ್ ಆಲ್ ಸ್ಲಾಟ್ಸ್'

Srinivasamurthy VN
ಬೆಂಗಳೂರು: ಆರ್ ಸಿಬಿ ವಿರುದ್ದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ಹೀರೋ ಆಗಿ ಮಿಂಚಿದ್ದ ಅಂಬಟಿ ರಾಯುಡು ಇದೀಗ ಟೂರ್ನಿ ಗರಿಷ್ಠ ರನ್ ಗಳ ಸಾಧಕರಾಗಿದ್ದಾರೆ.
ಐಪಿಎಲ್ 2018ನೇ ಸಾಲಿನ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಿಂದ 283 ರನ್ ಗಳಿಸಿರುವ ರಾಯುಡು ಟೂರ್ನಿಯ ಗರಿಷ್ಛ ರನ್ ಸಾಧಕರಾಗಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಟೂರ್ನಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ, ಸುರೇಶ್ ರೈನಾ ಶೇನ್ ವಾಟ್ಸನ್, ಬ್ರಾವೋ, ಸ್ಯಾಮ್ ಬಿಲ್ಲಿಂಗ್ಸ್ ರಂತಹ ಘಟಾನುಘಟಿ ಆಟಗಾರರಿದ್ದರೂ, ಅಂಬಟಿ ರಾಯುಡು ತಮಗೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಟೂರ್ನಿಯಲ್ಲಿ ಗರಿಷ್ಛ ರನ್ ಸಾಧಕರಾಗಿದ್ದಾರೆ.
ಪ್ರಮುಖವಾಗಿ ರಾಯುಡು ಅವರನ್ನು ಫ್ಲೆಕ್ಸಿಬಲ್ ಬ್ಯಾಟ್ಸಮನ್ ಎಂದು ಕರೆಯಬಹುದು. ಇಂತಹ ಕ್ರಮಾಂಕವೇ ಬೇಕು ಎಂದು ಪಟ್ಟು ಹಿಡಿಯದ ರಾಯುಡು ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಕ್ರಮಾಂಕದಲ್ಲೂ ಆಡುವ ಸಾಮರ್ಥ್ಯಹೊಂದಿದ್ದಾರೆ. ಇನ್ನು ಚೆನ್ನೈ ತಂಡಕ್ಕೆ ರಾಯುಡು ಸೇರ್ಪಡೆಯಾದದ್ದೇ ಕೇದಾರ್ ಜಾದವ್ ಗಾಯದ ಸಮಸ್ಯೆಯಿಂದ. ಕೇದಾರ್ ಜಾದವ್ ಮೊದಲ ಪಂದ್ಯದ ವೇಳೆ ಮೊಣಕೈ ಮಣಿಕಟ್ಟಿನ ಗಾಯದ ಸಮಸ್ಯೆ ಎದುರಿಸಿದ್ದರು. ಬಳಿಕ ಅವರ ಸ್ಥಾನಕ್ಕೆ ಅಂಬಟಿ ರಾಯುಡು ಅವರನ್ನು ಸೇರಿಸಿಕೊಳ್ಳಲಾಗಿತ್ತು. ಅಂದು ತಂಡ ಸೇರಿಕೊಂಡ ರಾಯುಡು ನಿರಂತರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇದೀಗ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿ ಬದಲಾಗಿದ್ದಾರೆ. ಈ ಹಿಂದೆ ಸನ್ ರೈಸರ್ಸ್ ತಂಡದ ವಿರುದ್ಧ 72 ರನ್ ಸಿಡಿಸಿದ್ದ ರಾಯುಡು, ಆರ್ ಸಿಬಿ ವಿರುದ್ಧಘ 82 ರನ್ ಭಾರಿಸಿದ್ದರು.
ಈ ಎರಡು ಇನ್ನಿಂಗ್ಸ್ ಗಳೇ ಅವರನ್ನು ಗರಿಷ್ಛ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿಸಿದೆ. ಅಲ್ಲದೆ ಇದೀಗ ಚೆನ್ನೈ ತಂಡದ ಆರಂಭಿಕ ಆಟಗಾರನಾಗಿ ಭಡ್ತಿ ಪಡೆದಿದ್ದಾರೆ. 
ಈ ಬಗ್ಗೆ ಖುಷಿಯಿಂದ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಚ್ ಸ್ಟೀಫನ್ ಫ್ಲೆಮಿಂಗ್, ರಾಯುಡು ಐಪಿಎಲ್ 2018ರ ಟೂರ್ನಿಯ ಅಪಾಯಕಾರಿ ಬ್ಯಾಟ್ಸಮನ್ ಆಗಿ ಬದಲಾಗಿದ್ದಾರೆ. ಟೂರ್ನಿಯಲ್ಲಿ ಅವರು ವಿವಿಧ ಕ್ರಮಾಂಕದಲ್ಲಿ ವಿವಿಧ ಬಗೆಯ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಅವರ ಸಾಮಾನ್ಯ ಕ್ರಮಾಂಕದ ಬ್ಯಾಟಿಂಗ್ ಪ್ರದರ್ಶನದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರದಂತೆ ಪ್ರದರ್ಶನ ಕಾಯ್ದು ಕೊಂಡಿದ್ದಾರೆ. ಯಾವುದೇ ಬ್ಯಾಟ್ಸಮನ್ ಗಾದರೂ ಇದು ಕಷ್ಟ ಸಾಧ್ಯ. ಆದರೆ ಅಂಬಟಿ ಇದನ್ನು ಮಾಡಿ ತೋರಿಸಿದ್ದಾರೆ. ಯಾವುದೇ ಮಾದರಿಯ ಕ್ರಿಕೆಟ್ ನಲ್ಲೂ ದೊಡ್ಡ ಹೊಡೆತಗಳಿಗಿಂತ ಸಮಯೋಚಿತ ಹೊಡೆತಗಳು ಲಾಭದಾಯಕವಾಗಿರುತ್ತದೆ ಎಂದು  ಹೇಳಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತದ ಹೊರತಾಗಿಯೂ ರಾಯುಡು ಮತ್ತು ಧೋನಿ ತಮ್ಮ ಅದ್ಬುತ ಬ್ಯಾಟಿಂಗ್ ಪ್ರದರ್ಶನದಿಂದ ಕೊಹ್ಲಿ ಪಡೆಯಿಂದ ಗೆಲುವು ಕಸಿದಿದ್ದರು.
SCROLL FOR NEXT