ಕ್ರಿಕೆಟ್

ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿ ಪಡೆಗೆ ತರಬೇತಿಗಾಗಿ ಸಾಕಷ್ಟು ಸಮಯಾವಕಾಶವಿದೆ: ಜಹೀರ್ ಖಾನ್

Srinivasamurthy VN
ನವದೆಹಲಿ: ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಹಿನ್ನಲೆಯಲ್ಲಿ ಕೊಹ್ಲಿ ಪಡೆಗೆ ಸಾಕಷ್ಟು ಸಮಯಾವಕಾಶವಿದೆ ಎಂದು ಮಾಜಿ ವೇಗಿ ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಐಪಿಎಸ್ ಟೂರ್ನಿಯಲ್ಲಿ ಭಾಗಿಯಾಗಿರುವ ಟೀಂ ಇಂಡಿಯಾ ಆಟಗಾರರು ಐಪಿಎಲ್ ಬಳಿಕ ಆಫ್ಘನ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಅಲ್ಲಿಂದ ನೇರವಾಗಿ ಐರ್ಲೆಂಡ್ ಗೆ ತೆರಳಲಿದ್ದು, ಅಲ್ಲಿ 2 ಟಿ20 ಪಂದ್ಯಗಳನ್ನಾಡಲಿದೆ. ಅಲ್ಲಿಂದ ಇಂಗ್ಲೆಂಡ್ ಗೆ ತೆರಳಲಿದ್ದು, ಅಲ್ಲಿ ಟೆಸ್ಟ್, ಏಕದಿನ ಮತ್ತು ಕೆಲ ಟಿ20 ಪಂದ್ಯಗಳನ್ನು ಆಡಲಿದ್ದಾರೆ. ಭಾರತದ ಮಟ್ಟಿಗೆ ಹಾಲಿ ಇಂಗ್ಲೆಂಡ್ ಪ್ರವಾಸ ಬಹುಮುಖ್ಯವಾಗಿದ್ದು, ಇದೇ ಕಾರಣಕ್ಕೆ ಎಲ್ಲರ ಚಿಕ್ಕ ಇದೀಗ ಟೀಂ ಇಂಡಿಯಾ ಮೇಲೆ ನೆಟ್ಟಿದೆ.
ಈ ವಿಚಾರವಾಗಿ ಮಾತನಾಡಿರುವ ಮಾಜಿ ವೇಗಿ ಜಹೀರ್ ಖಾನ್, ಇಂಗ್ಲೆಂಡ್ ಪ್ರವಾಸಕ್ಕೆ ಅಣಿಯಾಗಲು ಕೊಹ್ಲಿ ಪಡೆಗೆ ತಿಂಗಳ ಕಾಲಾವಕಾಶವಿದೆ. ಹೀಗಾಗಿ ಅಫ್ಘನ್ ಪ್ರವಾಸದ ಬಳಿಕ ಐರ್ಲೆಂಡ್ ಪ್ರವಾಸ ಮಾಡುವ ಭಾರತಕ್ಕೆ ಅಲ್ಲಿನ ವಾತಾವರಣದ ಕುರಿತು ಅರಿಯಲು ಉತ್ತಮ ಅವಕಾಶವಿದೆ.  ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಆಟಗಾರರು ಒಂದೇ ಮಾದರಿ ಕ್ರಿಕೆಟ್ ನಲ್ಲಿ ಬಿಸಿಯಾಗಿದ್ದಾರೆ. ತಂಡದ ಕೆಲ ಪ್ರಮುಖ ಆಟಗಾರರು ಮಾತ್ರ ಮೂರೂ ಬಗೆಯ ಕ್ರಿಕೆಟ್ ಆಡುತ್ತಿದ್ದು, ಉಳಿದ ಆಟಗಾರರೂ ಇತರೆ ಮಾದರಿಯ ಕ್ರಿಕೆಟ್ ನಲ್ಲಿ ಪರೀಕ್ಷಿಸಬೇಕಿದೆ. ಆಗ ಮಾತ್ರ ನಮಗೆ ನಿರ್ಣಾಯಕ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚ ಅವಕಾಶಗಳು ದೊರೆಯುತ್ತವೆ ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಟೀಂ ಇಂಡಿಯಾ ಇದೇ ಜೂನ್ 14ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ದ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಐರ್ಲೆಂಡ್ ಗೆ ತೆರಳಿಲಿರುವ ತಂಡ ಅಲ್ಲಿ ಜೂನ್ 27 ಮತ್ತು 29ರಂದು ಡಬ್ಲಿನ್ ನಲ್ಲಿ 2 ಟಿ20 ಪಂದ್ಯಗಳನ್ನಾಡಲಿದೆ. ಜುಲೈ 3ರಿಂದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದ್ದು, ಜುಲೈ 3 ರಿಂದ ಸೆಪ್ಟೆಂಬರ್ 7ರವರೆಗೂ 3 ಟಿ20, 3 ಏಕದಿನ ಮತ್ತು 5 ಟೆಸ್ಟ್ ಪಂದ್ಯಗಳನ್ನಾಡಲಿದೆ.
SCROLL FOR NEXT