ಜೋ ರೂಟ್-ವಿರಾಟ್ ಕೊಹ್ಲಿ 
ಕ್ರಿಕೆಟ್

ಜೋ ರೂಟ್-ವಿರಾಟ್ ಕೊಹ್ಲಿ ಶೀತಲ ಸಮರಕ್ಕೆ ನಾಂದಿ!

ಏಕದಿನ ಕ್ರಿಕೆಟ್ ಸರಣಿ ವೇಳೆ ಶತಕ ಸಿಡಿಸಿದ ಸಂಭ್ರಮದಲ್ಲಿ ಬ್ಯಾಟ್ ಬಿಟ್ಟು ಕೊಹ್ಲಿ ಕೆಣಕಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಜೋ ರೂಟ್ ಗೆ ತಮ್ಮದೇ ಶೈಲಿಯಲ್ಲಿ...

ಲಂಡನ್: ಏಕದಿನ ಕ್ರಿಕೆಟ್ ಸರಣಿ ವೇಳೆ ಶತಕ ಸಿಡಿಸಿದ ಸಂಭ್ರಮದಲ್ಲಿ ಬ್ಯಾಟ್ ಬಿಟ್ಟು ಕೊಹ್ಲಿ ಕೆಣಕಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಜೋ ರೂಟ್ ಗೆ ತಮ್ಮದೇ ಶೈಲಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದು ಇದೀಗ ಇಬ್ಬರ ನಡುವಿನ ಶೀತಲ ಸಮರಕ್ಕೆ ನಾಂದಿ ಹಾಡಲಾಗಿದೆ. 
ವಿರಾಟ್ ಕೊಹ್ಲಿ ಮೈಕ್ ಬಿಟ್ಟು ನನ್ನನ್ನು ಕೆಣಕ್ಕಿದ್ದು ಇನ್ನು ಮುಂದಿನ ಐದು ಟೆಸ್ಟ್ ಪಂದ್ಯಗಳಿಗೆ ಒಳ್ಳೆಯ ಮಸಾಲೆ ಸಿಗಲಿದೆ ಎಂದು ಜೋ ರೂಟ್ ಹೇಳಿದ್ದಾರೆ. 
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಖ್ಯಾತಿ, ಕುಖ್ಯಾತಿ ಪಡೆದ ಕ್ರಿಕೆಟಿಗ. ಸಾಮಾನ್ಯವಾಗಿ ಕೊಹ್ಲಿ ಇತರೆ ಆಟಗಾರರನ್ನು ಕೆಣಕುವುದು ಹೆಚ್ಚು. ಅಂತಹುದರಲ್ಲಿ ಕೊಹ್ಲಿಯನ್ನು ಕೆಣಕಿ ಬದುಕುವುದುಂಟೇ.. ಕೊಹ್ಲಿ ಅವರಿಗೆ ತಿರುಗೇಟು ನೀಡುವವರೆಗೂ ಬಿಡುವುದಿಲ್ಲ. ಬಹುಶಃ ಇಂಗ್ಲೆಂಡ್ ತಂಡದ ಜೋರೂಟ್ ಗೆ ಈ ವಿಚಾರ ನಿನ್ನೆ ಅರ್ಥವಾಗಿರಬೇಕು.
ಈ ಹಿಂದೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಜೋ ರೂಟ್ ಶತಕ ಸಿಡಿಸಿದಾಗ ಕೊಹ್ಲಿಯನ್ನು ಕೆಣಕುವಂತೆ ಕೈಯಲ್ಲಿದ್ಜ ಬ್ಯಾಟ್ ಅನ್ನು ಕೆಳಗೆ ಬಿಟ್ಟು ಶತಕ ಸಂಭ್ರಮ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಟ್ರಾಲ್ ಗಳಿಗೆ ಕಾರಣವಾಗಿತ್ತು. ಆದರೆ ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಕೊಹ್ಲಿ, ಅವಕಾಶಕ್ಕಾಗಿ ಕಾಯುತ್ತಿದ್ದರು.
ನಿನ್ನೆ ಅವರಿಗೆ ಈ ಅವಕಾಶ ಸಿಕ್ಕಿದ್ದು, ಬ್ಯಾಟಿಂಗ್ ಮಾಡುತ್ತಿದ್ದ ಜೋ ರೂಟ್ 2 ರನ್ ಕದಿಯಲು ಹೋಗಿ ರನೌಟ್ ಆದರು. ಕೂಡಲೇ ಕೊಹ್ಲಿ ಜೋರೂಟ್ ವಿಕೆಟ್ ಉರುಳಿಸಿದ ಸಂಭ್ರಮದ ನಿಮಿತ್ತ ಮೈಕ್ ಅನ್ನು ಡ್ರಾಪ್ ಮಾಡುವ ರೀತಿಯಲ್ಲಿ ಅವರನ್ನು ಕಿಚಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!