ಕ್ರಿಕೆಟ್

ಕಹಿ ನೆನಪುಗಳ ಹತ್ತಿಕ್ಕಿದ ಸೂಪರ್‌ ಸೆಂಚುರಿ ಪ್ರೀತಿಯ ಮಡದಿಗೆ ಅರ್ಪಿಸಿದ ವಿರಾಟ್ ಕೊಹ್ಲಿ!

Srinivasamurthy VN
ಲಂಡನ್: ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು, ತಮ್ಮ ಕಹಿ ನೆನಪುಗಳ ಹತ್ತಿಕ್ಕಿದ ಈ ಸೂಪರ್‌ ಸೆಂಚುರಿಯನ್ನು ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಪರ ಏಕಾಂಗಿ ಹೋರಾಟ ಮಾಡಿದ ವಿರಾಟ್ ಕೊಹ್ಲಿ ಒಟ್ಟು 225 ಎಸೆತಗಳಲ್ಲಿ 149 ರನ್ ಪೇರಿಸಿದರು. ಆ ಮೂಲಕ ತಂಡ ಗಳಿಸಿದ ಒಟ್ಟಾರೆ ಮೊತ್ತದಲ್ಲಿ ಶೇ.55ರಷ್ಟು ರನ್ ಗಳನ್ನು ತಾವೊಬ್ಬರೇ ಗಳಿಸಿದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ತಮ್ಮ ಈ ಹಿಂದಿನ ಕಳಪೆ ಪ್ರದರ್ಶನವನ್ನು ಮೆಟ್ಟಿನಿಂತ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆಯೇ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ತಮ್ಮ ಶತಕವನ್ನು ಅರ್ಪಿಸಿದರು. ಅಲ್ಲದೆ ಅನುಷ್ಕಾ ಶರ್ಮಾ ಅವರನ್ನು ಉದ್ದೇಶಿಸಿ ತಮ್ಮ ಎಂದಿನ ಶೈಲಿಯಂತೆ ಬ್ಯಾಟ್ ಗೆ ಮುತ್ತು ನೀಡಿದರು.
ಇತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಕೂಡ ಎದ್ದು ನಿಂತ ತಮ್ಮ ಪತಿಯ ಸಾಧನೆಗೆ ಸಾಕ್ಷಿಯಾಗಿದ್ದು ಮಾತ್ರವಲ್ಲದೇ ಚಪ್ಪಾಳೆ ತಟ್ಟುತಾ ಹುರಿದುಂಬಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ, ಏಕಾಂಗಿಯಾಗಿ ಭಾರತ ತಂಡದ ನೆರವಿಗೆ ಬಂದ ನಾಯಕ ವಿರಾಟ್‌ ಕೊಹ್ಲಿ, ಈ ಶತಕದ ಮೂಲಕ ತಮ್ಮ ಮೇಲಿನ ಅತಿಯಾದ ಒತ್ತಡವನ್ನು ಕಡಿಮೆ ಮಾಡಿಕೊಂಡಿದ್ದಾರೆ. 2014ರ ಇಂಗ್ಲೆಂಡ್‌ ಪ್ರವಾಸದ ವೇಳೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ಎಡವಿದ್ದ ಕೊಹ್ಲಿ, ಇಂಗ್ಲಿಷ್ ವೇಗದ ದಾಳಿ ಎದುರು ತತ್ತರಿಸಿದ್ದರು. ಅದರಲ್ಲೂ ಜೇಮ್ಸ್‌ ಆಂಡರ್ಸನ್‌ಗೆ ನಾಲ್ಕು ಬಾರಿ ಬಲಿಯಾಗುವ ಮೂಲಕ, ಸುದೀರ್ಘ ಇನಿಂಗ್ಸ್‌ ಆಡುವ ತಮ್ಮ ಟೆಂಪರಮೆಂಟ್‌ ಕುರಿತಾಗಿಯೇ ಪ್ರಶ್ನೆಗಳು ಏಳುವ ಮಟ್ಟಿಗೆ ಕೊಹ್ಲಿ ವಿಫಲರಾಗಿದ್ದರು.
ಐದು ಟೆಸ್ಟ್ ಪಂದ್ಯಗಳ ಹತ್ತು ಇನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 134 ರನ್‌ ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ ಗುರುವಾರದ ಒಂದೇ ಒಂದು ಅತ್ಯುತ್ತಮ ಇನಿಂಗ್ಸ್‌ನಲ್ಲಿ ಕೊಹ್ಲಿ ಇದನ್ನು ದಾಟಿದ್ದಾರೆ. ಆದರೆ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕೊಹ್ಲಿ ನಿಟ್ಟುಸಿರುವ ಬಿಟ್ಟಿದ್ದರು. ಒದದೆಡೆ ವಿಕೆಟ್‌ಗಳು ನಿರಂತರ ಪತನವಾಗುತ್ತಿದ್ದರೂ ಮತ್ತೊಂದೆಡೆ ಸಂಕಲ್ಪದಿಂದ ಆಡಿದ ಕೊಹ್ಲಿ, ತಮಗೆ ಸಿಕ್ಕ ಜೀವದಾನವನ್ನು ಚೆನ್ನಾಗಿ ಬಳಸಿಕೊಂಡು ತಂಡದ ಹಿನ್ನಡೆಯನ್ನು 13ರನ್‌ಗಳಿಗೆ ಇಳಿಸಿದರು.
SCROLL FOR NEXT