ಹೈದರಾಬಾದ್: ಸ್ವಾತಂತ್ರ್ಯ ದಿನಾಚರಣೆಗೆ ತಡವಾಗಿ ಶುಭಾಶಯ ಕೋರಿದ್ದ ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ ಗೆ ಟ್ರೋಲ್ ಮಾಡಿದವನಿಗೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಟ್ರೋಲಿಗನ ಬಾಯಿ ಮುಚ್ಚಿಸಿದ್ದಾರೆ.
ಮಿಥಾಲಿ ರಾಜ್ ತಮ್ಮ ಟ್ವೀಟರ್ ಖಾತೆಯಲ್ಲಿ ತಡರಾತ್ರಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶುಭಾಶಯ ಕೋರಿದ್ದರು. ಇದಕ್ಕೆ ಮನೋಜ್ ಎಂಬಾತ ಸ್ವಾತಂತ್ರ್ಯ ದಿನಾಚರಣೆ ಮುಗಿದಿದೆ. ಒಬ್ಬ ಸೆಲೆಬ್ರಿಟಿಯಾಗಿ ಇಷ್ಟು ತಡವಾಗಿ ಶುಭ ಕೋರುವುದು ಸರಿಯಲ್ಲ ಎಂದು ಮಿಥಲಿ ರಾಜ್ ಗೆ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ.
ಇದಕ್ಕೆ ಉತ್ತರವಾಗಿ ಮಿಥಾಲಿ ರಾಜ್ ನೀವು ನನ್ನನ್ನು ಸೆಲೆಬ್ರಿಟಿ ಎಂದು ತಿಳಿದುಕೊಂಡಿರುವುದಕ್ಕೆ ಗೌರವವಿದೆ. ನಾನು 1999ರಿಂದ ಒಬ್ಬ ಕ್ರೀಡಾಪಟುವಾಗಿ ದೇಶದ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಚಾಲೆಂಜರ್ಸ್ ಟ್ರೋಫಿಯಲ್ಲಿ ಆಡುತ್ತಿರುವುದರಿಂದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅಥವಾ ಪಂದ್ಯದ ನಂತರದಲ್ಲಿ ಮೊಬೈಲ್ ಫೋಟೋಗಳನ್ನು ನಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ತಡವಾಗಿ ಶುಭ ಕೋರಿರುವುದಕ್ಕೆ ಇದು ಸರಿಯಾದ ಸೂಕ್ತ ಕಾರಣ ಆಗಬಹುದು ಎಂದು ಭಾವಿಸುತ್ತೇನೆ ಎನ್ನುವ ಮೂಲಕ ಉತ್ತರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics