ನ್ಯಾಟಿಂಗ್‌ಹ್ಯಾಮ್(ಇಂಗ್ಲೆಂಡ್): ಭಾರತ-ಇಂಗ್ಲೇಂಡ್ ನಡುವಿನ ಮೂರ್ನೇ ಟೆಸ್ಟ್ ಗಾಗಿ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು ಆಲ್ರೌಂಡರ್ ಬೆನ್ ಸ್ಟೋಕ್ಸ್ ಕಂ ಬ್ಯಾಕ್ ಆಗಿದ್ದಾರೆ. ಇದೇ ವೇಳೆ ಪ್ರಥಮ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಯಾಮ್ ಕರ್ರನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಸೆಪ್ಟೆಂಬರ್ ನಲ್ಲಿ ಬ್ರಿಸ್ಟೋಲ್ ನಲ್ಲಿ ನಡೆಯಲಿರುವ ವಿಚಾರಣೆಗಾಗಿ ಪೂರ್ವಭಾವಿಯಾಗಿ ಹಾಜರಾಗಿದ್ದ ಸ್ಟೊಕ್ಸ್ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಇದೀಗ ನ್ಯಾಯಾಲಯ ಅವರನ್ನು ನಿರಪರಾಧಿ ಎಂದು ಹೇಳಿದ ಬಳಿಕ ಕರ್ರನ್ ಬದಲಿಯಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 31 ರನ್ ಗಳ ಜಯ ದಾಖಲಿಸುವಲ್ಲಿ ಕರ್ರನ್ ಹಾಗು ಸ್ಟೊಕ್ಸ್ ಜೋಡಿಯ ಪಾತ್ರ ಮಹತ್ವದ್ದಾಗಿತ್ತು.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಇದಾಗಲೇ 2-0 ಮುನ್ನಡೆ ಸಾಧಿಸಿದ್ದು ವಿರಾಟ್ ಕೊಹ್ಲಿ ಪಡೆ ಸರಣಿ ಗೆಲುವಿಗಾಗಿ ಇನ್ನು ಮೂರೂ ಪಂದ್ಯಗಳನ್ನು ಜಯಿಸುವುದು ಅನಿವಾರ್ಯವಾಗಿದೆ.