ವಿರಾಟ್ ಕೊಹ್ಲಿ-ನಾಸಿರ್ ಹುಸೇನ್ 
ಕ್ರಿಕೆಟ್

ಟೀಕಿಸಿದ್ದ ಇಂಗ್ಲೆಂಡಿಗನಿಂದಲೇ 'ಸರ್ವಶ್ರೇಷ್ಠ ಬ್ಯಾಟ್ಸ್‌ಮನ್' ಎನಿಸಿಕೊಂಡ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇನ್ನೂ ನಾಯಕತ್ವ ಪಕ್ವವಾಗಿಲ್ಲ ಎಂದೆಲ್ಲ ಟೀಕಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ರಿಂದಲೇ ಕೊಹ್ಲಿ ಭೇಷ್ ಎನಿಸಿಕೊಂಡಿದ್ದಾರೆ...

ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇನ್ನೂ ನಾಯಕತ್ವ ಪಕ್ವವಾಗಿಲ್ಲ ಎಂದೆಲ್ಲ ಟೀಕಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ರಿಂದಲೇ ಕೊಹ್ಲಿ ಭೇಷ್ ಎನಿಸಿಕೊಂಡಿದ್ದಾರೆ. 
ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ವಿರಾಟ್ ಕೊಹ್ಲಿಯೇ ಕಾರಣ. ಈ ಪಂದ್ಯದಲ್ಲಿ ಆರ್ ಅಶ್ವಿನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು ಅವರನ್ನು ಒಂದು ಗಂಟೆಗಳ ಕಾಲ ಮೈದಾನದಿಂದ ದೂರ ಇಟ್ಟಿದೆ ಈ ಪಂದ್ಯ ಸೋಲಿಗೆ ಕಾರಣ ಎಂದು ಹೇಳಿದ್ದರು. 
ತಮ್ಮನ್ನು ಟೀಕಿಸಿದ್ದ ನಾಸಿರ್ ಹುಸೈನ್ ಅವರಿಗೆ  ಕೊಹ್ಲಿ ಬಾಯಿ ಮಾತಿನಿಂದ ಉತ್ತರ ಕೊಡಲು ಹೋಗದೆ ತಮ್ಮ ಅದ್ಭುತ ಬ್ಯಾಟಿಂಗ್ ನಿಂದ ತಕ್ಕ ಉತ್ತರ ನೀಡಿದ್ದಾರೆ. ಇದೀಗ ನಾಸಿರ್ ಕೊಹ್ಲಿಯನ್ನು ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಕರೆದಿದ್ದಾರೆ. 
ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ಹಾಗೂ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ವಿರಾಟ್ ಕೊಹ್ಲಿಯನ್ನು ಟೀಕಿಸಲು ಯಾವುದೇ ಕಾರಣಗಳು ಸಿಗದಂತೆ ಆಗಿದೆ. ಒಟ್ಟಿನಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ವಿರುದ್ಧದ ಟೀಕೆಗಳಿಗೆ ಬಾಯಿಯಿಂದ ಉತ್ತರ ಕೊಡುವ ಬದಲು ತಮ್ಮ ಅದ್ಭುತ ಆಟದಿಂದ ಉತ್ತರ ಕೊಡುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್ ಶಿಪ್: ಸರ್ವೇಗೆ ಬಂದ ಅಧಿಕಾರಿಗಳಿಗೆ ರೈತ ಮಹಿಳೆಯರಿಂದ ಪೊರಕೆ ಏಟು: ಕಾರಿನ ಗ್ಲಾಸ್ ಪೀಸ್!

CCTV ಕಡ್ಡಾಯ: ಮುಜರಾಯಿ ದೇವಾಲಯಗಳಲ್ಲಿ ಭದ್ರತೆ, ದೇಣಿಗೆಗಳ ಪಾರದರ್ಶಕತೆಗಾಗಿ ರಾಜ್ಯ ಸರ್ಕಾರದಿಂದ SOP

ಅಕ್ರಮ ಸಂಬಂಧಕ್ಕೆ ಅಡ್ಡಿ: ಪತ್ನಿಯನ್ನು ಕೊಂದು, ಶವ ನೀರಿನ ಟ್ಯಾಂಕ್‌ನಲ್ಲಿಟ್ಟಿದ್ದ ಪಾಪಿ ಪತಿಯ ಬಂಧನ!

ದಾಖಲೆಯಲ್ಲಿ ಸ್ಪೆಲ್ಲಿಂಗ್ ತಪ್ಪಾಗಿದೆ ಎಂಬ ಕಾರಣ ಆತ ವಿದೇಶಿಗನಲ್ಲ; ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಖಡಕ್ ಸೂಚನೆ

ಹನಿಮೂನ್ ಆಯ್ತು, ಈಗ ರೈಲಿನಲ್ಲೇ ಪೂಜೆ-ಪುನಸ್ಕಾರ; video ವೈರಲ್, ಇಲಾಖೆ ಸ್ಪಷ್ಟನೆ! ಇಷ್ಟಕ್ಕೂ ಏನಿದು ಸಲೂನ್ ಕೋಚ್?