ಎನ್‌ಗೊಲೊ ಕಾಂಟೆ-ಕೆಎಲ್ ರಾಹುಲ್
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕನ್ನಡಿಗ ಕೆಎಲ್ ರಾಹುಲ್ ಕಂಡೆ ಫಿಫಾ ವಿಶ್ವಕಪ್ ವಿಜೇತ ತಂಡ ಫ್ರಾನ್ಸ್ ಆಟಗಾರ ಎನ್‌ಗೊಲೊ ಕಾಂಟೆಗೆ ಬೇಸರವಿದೆಯಂತೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅವರು ಫುಟ್ಬಾಲ್ ಲೈವ್ ಪ್ರಿಮಿಯರ್ ಲೀಗ್ ಹರಾಜಿನಲ್ಲಿ ಭಾಗವಹಿಸಿದ್ದರು ಈ ವೇಳೆ ಎನ್‌ಗೊಲೊ ಕಾಂಟೆ ಅವರನ್ನು ಭೇಟಿ ಮಾಡಿದ್ದರು. ಆಗ ತೆಗೆಸಿಕೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡಿದ್ದರು.
ಫೋಟೋ ಕೆಳಗೆ ಚಾಂಪಿಯನ್ ಎನ್‌ಗೊಲೊ ಕಾಂಟೆ ಜೊತೆಗೆ ಫುಟ್ಬಾಲ್ ಮತ್ತು ಕ್ರಿಕೆಟ್ ಬಗ್ಗೆ ಚರ್ಚಿಸಿದ್ದೆ. ನಾವು ವಿಶ್ವಕಪ್ ಪಂದ್ಯಾವಳಿಯ ಅನುಭವದ ಬಗ್ಗೆ ಮಾತನಾಡಿದ್ದೇವು. ಇನ್ನು ಎನ್‌ಗೊಲೊ ಕಾಂಟೆ ಫುಟ್ಬಾಲ್ ಗೆ ಬಂದಿದ್ದು ಹೀಗೆ ಎಂಬ ನಾನು ವಿಚಾರಗಳನ್ನು ಮಾತನಾಡಿದ್ದವು. ನಾನು ಚೆಲ್ಪಿಯಾ ಅಭಿಮಾನಿಯಾಗಿದ್ದೇನೆ ಎಂದು ಆತ ಖುಷಿಯಿಂದಿರಲಿಲ್ಲ. ನಿಜವಾಗಿಯೂ ವಿನಮ್ರ ವ್ಯಕ್ತಿ. ಗೌರವ ಎಂದು ಕೆಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾದ ವೇಗಿಗಳಾದ ಉಮೇಶ್ ಯಾದವ್ ಮತ್ತು ಜಸ್ ಪ್ರೀತ್ ಬುಮ್ರಾ ಸಹ ಎಮಿರೇಟ್ಸ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಆಟಗಾರರ ಜತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics