ಕ್ರಿಕೆಟ್

100 ಎಸೆತದ ಕ್ರಿಕೆಟ್ ಬಗ್ಗೆ ವಿರಾಟ್ ಕೊಹ್ಲಿ ಕೋಪಗೊಂಡಿದ್ದೇಕೆ, ಅಸಲಿಗೆ ಏನು ಹೇಳಿದ್ರು!

Vishwanath S
ಲಂಡನ್: ಕ್ರಿಕೆಟ್ ನಲ್ಲಿ ಹೊಸ ಬದಲಾವಣೆಗಳ ಪರ್ವ ಶುರುವಾಗಿದೆ. ಟೆಸ್ಟ್ ಕ್ರಿಕೆಟ್ ನಿಂದ ಹಿಡಿದು ಇದೀಗ ಟಿ20  ಮಾದರಿಗೆ ಬದಲಾಗಿದೆ. 
ಈ ಮಾದರಿಗೂ ಸರ್ಜರಿ ಮಾಡಿ ಬರೀ 100 ಎಸೆತದ ಕ್ರಿಕೆಟ್ ಟೂರ್ನಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಹೊಸ ಪ್ರಸ್ತಾಪವನ್ನು ಐಸಿಸಿ ಮುಂದಿಟ್ಟಿದ್ದು ಇದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. 
ನೂರು ಎಸೆತದ ಕ್ರಿಕೆಟ್ ಟೂರ್ನಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ರೂಪುರೇಷೆ ಸಿದ್ಧಪಡಿಸಿದ್ದು ಇದಿನ್ನ ಪ್ರಾಥಮಿಕ ಹಂತದಲ್ಲಿದ್ದು 2020ರ ವೇಳೆಗೆ ಈ ಮಾದರಿ ಕ್ರಿಕೆಟ್ ಟೂರ್ನಿ ಆಯೋಜಿಸುವ ಸನ್ನಾಹದಲ್ಲಿದೆ. 
ನೂರು ಎಸೆತದ ಕ್ರಿಕೆಟ್ ಟೂರ್ನಿ ಕುರಿತಂತೆ ಮಾತನಾಡಿರುವ ವಿರಾಟ್ ಕೊಹ್ಲಿ, ವಾಣಿಜ್ಯ ದೃಷ್ಟಿಯಿಂದ ಆಯೋಜಿಸುವ ಇಂತಹ ಪಂದ್ಯಗಳು ಕ್ರಿಕೆಟ್ ನ ಗುಣಮಟ್ಟವನ್ನು ಹಾಳುಗೆಡುವುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 
ಈಗಾಗಲೇ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಗಳಿದ್ದು ಮತ್ತೊಂದು ಹೊಸ ಮಾದರಿ ಕ್ರಿಕೆಟ್ ಆಟ ಅವಶ್ಯಕತೆ ಇಲ್ಲ. ಜನರು ಹೊಸ ಮಾದರಿಗೆ ಕಾತುರರಾಗಿರಬಹುದು ಆದರೆ ನಾನು ಇಂತಹ ಬೇರೆ ಬೇರೆ ಮಾದರಿಗಳ ಬಗ್ಗೆ ಯೋಚನೆಯನ್ನೇ ಮಾಡಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
SCROLL FOR NEXT