ಕ್ರಿಕೆಟ್

4ನೇ ಟೆಸ್ಟ್: ವಿರಾಟ್ ಕೊಹ್ಲಿ ಅತಿ ವೇಗವಾಗಿ 6000 ರನ್ ಪೂರೈಸಿದ 2ನೇ ಭಾರತೀಯ!

Lingaraj Badiger
ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ನ ಎರಡನೇ ದಿನವಾದ ಶುಕ್ರವಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್‌ ಗಳನ್ನು ಪೂರೈಸುವ ಮೂಲಕ ಅತಿ ವೇಗವಾಗಿ 6 ಸಾವಿರ ರನ್ ಪೂರೈಸಿದ ಎರಡನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಬಳಿಕ ಅತಿ ವೇಗದಲ್ಲಿ 6000 ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ 119ನೇ ಇನ್ನಿಂಗ್ಸ್‌ನಲ್ಲಿ 6000 ಮೈಲುಗಲನ್ನು ತಲುಪಿದ್ದಾರೆ. ಸುನಿಲ್ ಗವಾಸ್ಕರ್ 117, ಸಚಿನ್ ತೆಂಡೂಲ್ಕರ್ 120, ವೀರೇಂದ್ರ ಸೆಹ್ವಾಗ್ 121 ಹಾಗೂ ರಾಹುಲ್ ದ್ರಾವಿಡ್ 125 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ್ದರು. 
4ನೇ ಟೆಸ್ಟ್ ನ ಎರಡನೇ ದಿನ ಊಟದ ವಿರಾಮದ ಹೊತ್ತಿಗೆ ಭಾರತ 31 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಇನ್ನಿಂಗ್ಸ್ ಮುನ್ನಡೆ ಗಳಿಸಲು ಇನ್ನು 146 ರನ್ ಗಳಿಸಬೇಕಾದ ಅಗತ್ಯವಿದೆ.
SCROLL FOR NEXT