ಕ್ರಿಕೆಟ್

ಚಾಪೆಲ್ ಗೆ ಅಂತಾರಾಷ್ಟ್ರೀಯ ತಂಡವನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ: ವಿವಿಎಸ್ ಲಕ್ಷ್ಮಣ್

Srinivasamurthy VN
ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಗೆ ಅಂತಾರಾಷ್ಟ್ರೀಯ ತಂಡವನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಣಣ್ ಹೇಳಿದ್ದಾರೆ.
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಅಂದಿನ ಕೋಚ್ ಗ್ರೆಗ್ ಚಾಪೆಲ್ ನಡುವಣ ವಿವಾದ ಎಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲಿಯ ವರೆಗೂ ಯಾವೊಬ್ಬ ಕ್ರಿಕೆಟಿಗನೂ ಚಾಪೆಲ್ ಬಗ್ಗೆ ದೂರು ಹೇಳಿರಲಿಲ್ಲ. ಈ ಹಿಂದೆ ಇಯಾನ್ ಚಾಪೆಲ್ ಗೆ ಸಚಿನ್ ಅವರ ಸಹೋದರ ಗ್ರೇಗ್ ಕುರಿತಂತೆ ಟೀಕೆ ಮಾಡಿದ್ದ ವಿಚಾರದ ಬಳಿಕ ಇದೇ ಮೊದಲ ಬಾರಿಗೆ ವಿವಿಎಸ್ ಲಕ್ಷ್ಮಣ್ ಗ್ರೇಗ್ ಚಾಪೆಲ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರೇಗ್ ಚಾಪೆಲ್ ಗೆ ಅಂತಾರಾಷ್ಟ್ರೀಯ ತಂಡವನ್ನು ಹೇಗೆ ನಡೆಸಿಕೊಳ್ಳ ಬೇಕು  ಎಂಬುದು ತಿಳಿದಿಲ್ಲ ಎಂದು ಹೇಳಿರುವ ಲಕ್ಷ್ಮಣ್, ಕಟ್ಟುನಿಟ್ಟಾದ ಹಾಗೂ ಅವರ ಯಾರಿಗೂ ಜಗ್ಗದ ಕೋಚ್ ಎಂದು ಆಪಾದಿಸಿದ್ದಾರೆ. 
ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ತಮ್ಮ '281 ಆ್ಯಂಡ್ ಬಿಯಾಂಡ್' ಆತ್ಮಚರಿತ್ರೆಯಲ್ಲಿ ಈ ಎಲ್ಲ ವಿಚಾರಗಳನ್ನು ಲಕ್ಷ್ಮಣ್ ಬಹಿರಂಗ ಮಾಡಿದ್ದಾರೆ. 'ಕೋಚ್ ಗೆ ತಂಡದಲ್ಲಿ ತಮ್ಮದೇ ಆದ ಫೇವರಿಟ್‌ ಆಟಗಾರರಿದ್ದರು. ಅವರನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇತರರನ್ನು ಹಿಂದೆಯೇ ಬಿಡಲಾಯಿತು. ನಮ್ಮ ಕಣ್ಣ ಮುಂದೆಯೇ ತಂಡವು ವಿಭಜನೆಗೊಂಡಿತ್ತು. ಗ್ರೆಗ್ ಸಂಪೂರ್ಣ ಅವಧಿಯು ಕಹಿಯಾಗಿದೆ. ಅವರು ನಿಷ್ಠುರ ಹಾಗೂ ನಿರುಪಯುಕ್ತವಾಗಿದ್ದರು. ಹಾಗೆಯೇ ಅಂತಾರಾಷ್ಟ್ರೀಯ ತಂಡವನ್ನು ಹೇಗೆ ಚಲಾಯಿಸಬೇಕೆಂದು ತಿಳಿದಿರಲಿಲ್ಲ. ಆಟವಾಡುತ್ತಿರುವವರು ಆಟಗಾರರು ಕೋಚ್ ಗಳಲ್ಲ ಎಂಬುದನ್ನು ಸಹ ಮರೆತುಕೊಂಡಿದ್ದರು' ಎಂದು ಹೇಳಿದರು.
SCROLL FOR NEXT