ವೇಗದ ರನ್ ದಾಖಲೆ; ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ 1000 ರನ್ ಮೈಲುಗಲ್ಲು!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿರುತ್ತಾರೆ. ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಂದು...
ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿರುತ್ತಾರೆ. ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ವಿರಾಟ್ ಕೊಹ್ಲಿ 1000 ರನ್ ಗಳ ಮೈಲಿಗಲ್ಲು ತಲುಪಿದ್ದು ಈ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಡಿಲೇಡ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಅಪೂರ್ವ ಮೈಲುಗಲ್ಲನ್ನು ತಲುಪಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಈ ಸಾಧನೆಯನ್ನು ಕೇವಲ 18 ಇನ್ನಿಂಗ್ಸ್ ನಲ್ಲಿ ಪೂರೈಸಿದ್ದಾರೆ.
ಆಸೀಸ್ ನೆಲದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳ ಗರಿಷ್ಠ ರನ್:
* ಸಚಿನ್ ತೆಂಡೂಲ್ಕರ್: ಇನ್ನಿಂಗ್ಸ್ 38, ರನ್: 1809
* ವಿವಿಎಸ್ ಲಕ್ಷ್ಮಣ್: ಇನ್ನಿಂಗ್ಸ್ 29, ರನ್: 1236
* ರಾಹುಲ್ ದ್ರಾವಿಡ್: ಇನ್ನಿಂಗ್ಸ್ 28, ರನ್: 1143
* ವಿರಾಟ್ ಕೊಹ್ಲಿ: ಇನ್ನಿಂಗ್ಸ್ 18, ರನ್: 1004
1000 Test runs for @imVkohli in Australia.
He is the 4th Indian to achieve this feat