ಕ್ರಿಕೆಟ್

ರಿಷಬ್ ಪಂತ್ ಕೇವಲ ಅಬ್ಬರದ ಬ್ಯಾಟಿಂಗ್ ಮಾಡಿದರೆ ಸಾಲದು: ಸಂಜಯ್ ಬಂಗಾರ್

Vishwanath S
ಅಡಿಲೇಡ್: ಬಿಸಿ ರಕ್ತದ ಆಟಗಾರ ರಿಷಬ್ ಪಂತ್ ಕೇವಲ ಅಬ್ಬರದ ಬ್ಯಾಟಿಂಗ್ ಮಾಡಿದರೆ ಸಾಲದು? ಕಠಿಣ ಪರಿಸ್ಥಿತಿಯಲ್ಲಿ ಯುದ್ಧತಂತ್ರವನ್ನೂ ಅನುಸರಿಸಬೇಕು ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. 
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 38 ಎಸೆತಗಳಲ್ಲಿ 25 ರನ್ ಗಳಿಸಿದ್ದ ರಿಷಬ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 16 ಎಸೆತಗಳಲ್ಲಿ 28 ರನ್ ಗಳಿಸಿ ಔಟಾಗಿದ್ದರು. 
ಸ್ಫೋಟಕದ ಬ್ಯಾಟಿಂಗ್ ಮಾಡುತ್ತಿರುವ ರಿಷಬ್ ಪಂತ್ ಬಹುಬೇಗ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ತಂಡಕ್ಕೆ ಕೊಂಚ ಹಿನ್ನಡೆಯಾಗುತ್ತಿದೆ. ಕಠಿಣ ಪರಿಸ್ಥಿತಿಯಲ್ಲಿ ಸಂಯೋಚಿತ ಆಟ ಪ್ರದರ್ಶಿಸಿ ತಂಡಕ್ಕೆ ನೆರವಾಗಬೇಕಿದೆ ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು 6 ವಿಕೆಟ್ ಗಳನ್ನು ಪಡೆಯಬೇಕಿದೆ. ಇನ್ನು ಆಸ್ಟ್ರೇಲಿಯಾ ಗೆಲ್ಲಲು 219 ರನ್ ಗಳ ಅಗತ್ಯವಿದೆ.
SCROLL FOR NEXT