ಕ್ರಿಕೆಟ್

ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡ ಪ್ರಕಟ, ವೇದ ಕೃಷ್ಣಮೂರ್ತಿ ಔಟ್

Nagaraja AB
ನವದೆಹಲಿ: ಮುಂದಿನ ತಿಂಗಳು ಆರಂಭವಾಗಲಿರುವ ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ವೇದ ಕೃಷ್ಣಮೂರ್ತಿ ಅವರನ್ನು ಕೈಬಿಡಲಾಗಿದೆ. ಏಕದಿನ ಪಂದ್ಯಗಳಿಗೆ ಮಿಥಾಲಿ ರಾಜ್ ಹಾಗೂ ಟಿ-20 ಪಂದ್ಯಗಳಿಗೆ  ಹರ್ಮಾನ್ ಪ್ರೀತ್ ಕೌರ್ ನಾಯಕತ್ವ ವಹಿಸಲಿದ್ದಾರೆ.
ಜನವರಿ 24 ರಿಂದ ನ್ಯೂಜಿಲ್ಯಾಂಡ್ ನಲ್ಲಿ ಐಸಿಸಿ ಮಹಿಳಾ ಚಾಂಫಿಯನ್ ಶಿಪ್ ಆರಂಭವಾಗಲಿದ್ದು,  ಭಾರತ ತಂಡ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಲಿದೆ.
ಕಳೆದ ತಿಂಗಳು ನಡೆದಿದ್ದ  ವಿಶ್ವಕಪ್ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್  ವಿರುದ್ಧ ಸೆಮಿಫೈನಲ್ ನಲ್ಲಿ  ಭಾರತ ಸೋತು ನಿರ್ಗಮಿಸಿದ ನಂತರ ವಿವಾದ ಉಂಟಾಗಿತ್ತು. ತದನಂತರ ಈಗ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುತ್ತಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತರಬೇತುದಾರರಾಗಿ ಡಬ್ಲ್ಯೂ ರಾಮನ್ ನೇಮಕಗೊಂಡ  ಬೆನ್ನಲ್ಲೇ  ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಪಂದ್ಯಕ್ಕಾಗಿ 15 ಮಂದಿ ಆಟಗಾರರು ಹೆಸರನ್ನು ಪ್ರಕಟಿಸಲಾಗಿದೆ.
ಬಿಸಿಸಿಐ ಸಿಇಓ ರಾಹುಲ್ ಜೊಹಾರಿ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌದರಿ ಅವರ ಸಮ್ಮುಖದಲ್ಲಿ  ಆಟಗಾರರ ಹೆಸರನ್ನು ಆಯ್ಕೆ ಸಮಿತಿ ಮುಖ್ಯಸ್ಥೆ ಹೇಮಲತಾ ಕಲಾ ಪ್ರಕಟಿಸಿದರು. ವೇದ ಕೃಷ್ಣಮೂರ್ತಿ ಅವರನ್ನು ಏಕದಿನ ಹಾಗೂ ಟಿ-20 ಪಂದ್ಯಗಳಿಂದ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ಏಕದಿನ ಪಂದ್ಯಗಳಲ್ಲಿ ವೇದ ಕೃಷ್ಣಮೂರ್ತಿ ಬದಲಿಗೆ ಮೊನಾ ಮೆಸ್ರಾಮ್ ಹಾಗೂ ಟಿ-20 ಪಂದ್ಯಗಳಲ್ಲಿ ಪ್ರಿಯಾ ಪುನಿಯಾ  ಆಡಲಿದ್ದಾರೆ ಎಂದು ಹೇಮಲತಾ ಕಲಾ ಹೇಳಿದರು.
ಏಕದಿನ ಪಂದ್ಯದ ಆಟಗಾರರು .  ಮಿಥಾಲಿ ರಾಜ್ ( ಕ್ಯಾಪ್ಟನ್ ) ಪೂನಾಮ್ ರವುತ್, ಸ್ಮಿೃತಿ ಮಂದಣ್ಣ, ಹರ್ಮಾನ್  ಪ್ರೀತ್ ಕೌರ್, ದೀಪ್ತಿ ಶರ್ಮಾ , ತಾನ್ಯ ಬಾಟಿಯಾ, ಜೆಮಿಮಾ ರೊಡ್ರಿಗಸ್, ಮೊನಾ ಮೆಶ್ರಾಮ್, ಎಕ್ತಾ ಬಿಸ್ತ್, ಮಾಂಸಿ ಜೋಷಿ, ದಯಾಲನ್ ಹೇಮಲತಾ, ಪೂನಾಮ್ ಯಾದವ್, ರಾಜೇಶ್ವರಿ ಗಾಯಕ್ ವಾಡ್, ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ
ಟಿ-20 ಪಂದ್ಯದ ಆಟಗಾರರು
SCROLL FOR NEXT