ಆಸಿಸ್ ನಾಯಕ ಪೈನೆ ಹಾಗೂ ರೋಹಿತ್ ಶರ್ಮಾ
ಮೆಲ್ಬೋರ್ನ್: ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸಮನ್ ರೋಹಿತ್ ಶರ್ಮಾಗೆ ಆಸಿಸ್ ನಾಯಕ ಟಿಮ್ ಪೈನೆ ಸವಾಲು ಎಸೆದಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ಶರ್ಮಾ ರನ್ನು ಆಸಿಸ್ ನಾಯಕ ಟಿಮ್ ಪೈನೆ ಕಿಚಾಯಿಸಿದರು. ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿದ ಪೈನೆ, ರೋಹಿತ್ ಎಂಸಿಜಿಯಲ್ಲಿ ಸಿಕ್ಸರ್ ಬಾರಿಸಿದರೆ ನಾನು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಹೇಳಿದರು. ಪೈನೆ ಮಾತು ಕೇಳಿದ ರೋಹಿತ್ ನಕ್ಕು ಸುಮ್ಮನಾದರು.
ಆದರೆ ಅಷ್ಟಕ್ಕೆ ಸುಮ್ಮನಾಗದ ಪೈನೆ ತಮ್ಮ ಬದಿಯಲ್ಲಿದ್ದ ಆ್ಯರಾನ್ ಫಿಂಚ್ ರನ್ನು ಉದ್ದೇಶಿಸಿ ನೀನು ಎಲ್ಲ ತಂಡದಲ್ಲೂ ಆಡಿದ್ದೀಯಲ್ಲ.. ಎಂದರು. ಅದಕ್ಕೆ ಫಿಂಚ್ ಉತ್ತರು ಹೌದು... ಆದರೆ ಬೆಂಗಳೂರು ತಂಡವನ್ನು ಹೊರತು ಪಡಿಸಿ ಎಂದು ಉತ್ತರಿಸಿದರು. ಆ ಮೂಲಕ ಪೈನೆ ರೋಹಿತ್ ಶರ್ಮಾ ಅವರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದರು.
ಆಸಿಸ್ ನಾಯಕನ ಈ ಎಲ್ಲ ಕೃತ್ಯ ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ. ಅಷ್ಟೇ ಅಲ್ಲದೆ ಇದನ್ನು ಕೇಳಿಸಿಕೊಂಡ ಕಾಮೆಂಟಟೇರ್ಸ್ ಕೂಡ ನಕ್ಕು ನಲಿದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.