ಸಂಗ್ರಹ ಚಿತ್ರ 
ಕ್ರಿಕೆಟ್

ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ನಾಯಕನಿಗೆ ಸರ್ವಶ್ರೇಷ್ಠ 'ನೈಟ್ ಹುಡ್' ಗೌರವ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಅಲೆಸ್ಟರ್ ಕುಕ್ ಗೆ ಇಂಗ್ಲೆಂಡ್ ರಾಜಮನೆತನ ಸ್ಮರಣೀಯ ಗೌರವ ನೀಡಿದ್ದು, ಕುಕ್ ಅವರಿಗೆ 'ನೈಟ್ ಹುಡ್' ಗೌರವ ಘೋಷಣೆ ಮಾಡಲಾಗಿದೆ.

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಅಲೆಸ್ಟರ್ ಕುಕ್ ಗೆ ಇಂಗ್ಲೆಂಡ್ ರಾಜಮನೆತನ ಸ್ಮರಣೀಯ ಗೌರವ ನೀಡಿದ್ದು, ಕುಕ್ ಅವರಿಗೆ 'ನೈಟ್ ಹುಡ್' ಗೌರವ ಘೋಷಣೆ ಮಾಡಲಾಗಿದೆ.
ಪ್ರತೀ ವರ್ಷ ನಡೆಯುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇಂಗ್ಲೆಂಡ್ ರಾಜಮನೆತನ ದೇಶಕ್ಕಾಗಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿಗಳಿಗೆ  'ನೈಟ್ ಹುಡ್' ಗೌರವ ನೀಡುತ್ತಿದ್ದು, ಈ ಬಾರಿ ಈ ಪಟ್ಟಿಯಲ್ಲಿ ಕ್ರಿಕೆಟಿಗ ಅಲಿಸ್ಟರ್ ಕುಕ್ ಅವರ ಹೆಸರೂ ಕೂಡ ಸೇರ್ಪಡೆಯಾಗಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಯಶಸ್ವೀ ನಾಯಕ ಎಂದು ಕರೆಸಿಕೊಳ್ಳುವ ಕುಕ್ ಕಳೆದ ಸೆಪ್ಟೆಂಬರ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 
ಆರಂಭಿಕ ಬ್ಯಾಟ್ಸಮನ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಕುಕ್ ಬಳಿಕ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಇಂಗ್ಲೆಂಡ್ ಪರ ಒಟ್ಟು 160 ಟೆಸ್ಟ್ ಪಂದ್ಯಗಳನ್ನಾಡಿರುವ ಕುಕ್ 32 ಶತಕಗಳೂ ಒಳಗೊಂಡಂತೆ ಒಟ್ಟು 12,254 ರನ್ ಪೇರಿಸಿದ್ದಾರೆ. ಅಂತೆಯೇ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರರ ಪೈಕಿ ಕುಕ್ 6ನೇ ಆಟಗಾರರಾಗಿದ್ದು, ಪಟ್ಟಿಯಲ್ಲಿ 15,921 ರನ್ ಗಳಿಸಿರುವ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ಅಗ್ರ ಸ್ಥಾನಿಯಾಗಿದ್ದಾರೆ. ತಾವಾಡಿದ 160 ಟೆಸ್ಟ್ ಪಂದ್ಯಗಳ ಪೈಕಿ ಕುಕ್ ಒಟ್ಟು 59 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಸಾರಥ್ಯ ವಹಿಸಿದ್ದರು.
ಇದೀಗ ಕುಕ್ ಇಂಗ್ಲೆಂಡ್ ದೇಶಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಇಂಗ್ಲೆಂಡ್ ರಾಜಮನೆತನ ಕುಕ್ ಅವರಿಗೆ 'ನೈಟ್ ಹುಡ್' ಗೌರವ ನೀಡಲಾಗಿದೆ. ಇದೇ ಜನವರಿ 1 ರಂದು ಇಂಗ್ಲೆಂಡ್ ಅರಮನೆಯಲ್ಲಿ ನಡೆಯಲಿರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕುಕ್ ಅವರಿಗೆ ನೈಟ್ ಹುಡ್ ಗೌರವ ನೀಡಿ ಸನ್ಮಾನಿಸಲಾಗುತ್ತದೆ. ನೈಟ್ ಹುಡ್ ಗೌರವ ಸ್ವೀಕಾರದ ಬಳಿಕ ಕುಕ್ ಹೆಸರಿನ ಮುಂದೆ ಸರ್ ಎಂಬ ಬಿರುದು ಸೇರ್ಪಡೆಯಾಗಲಿದೆ. ಈ ಹಿಂದೆ ಅಂದರೆ 2007ರಲ್ಲಿ ಈ ಗೌರವಕ್ಕೆ ಮಾಜಿ ಕ್ರಿಕೆಟಿಗ ಇಯಾನ್ ಬಾತಮ್ ಪಾತ್ರರಾಗಿದ್ದರು. ಅ ಬಳಿಕ ಸುಮಾರು 11 ವರ್ಷಗಳ ಬಳಿಕ ಕುಕ್ ಮೂಲಕ ಓರ್ವ ಕ್ರಿಕೆಟಿಗನಿಗೆ ಈ ಗೌರವ ದೊರೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?