ಚೆನ್ನೈ : ಪ್ರಸ್ತುತ ಟೀಂ ಇಂಡಿಯಾ ಬೌಲಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಬೌಲಿಂಗ್ ದಾಳಿ ಮುಂದುವರೆಸಿದ್ದಲ್ಲಿ ಪ್ರತಿ ಟೆಸ್ಟ್ ನಲ್ಲಿ 20 ವಿಕೆಟ್ ಕಬಳಿಸಬಹುದು ಎಂದು ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಬೌಲರ್ ಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಪ್ರದರ್ಶನ ನಿರಂತರವಾಗಿ ಮುಂದುವರೆಯಬೇಕು. ಹಾಗೆ ಮುಂದುವರೆದರೆ ಪ್ರತಿ ಟೆಸ್ಟ್ ನಲ್ಲೂ 20 ವಿಕೆಟ್ ಗಳಿಸಬಹುದು .ಪಾಸ್ಟ್ ಬೌಲಿಂಗ್ ಯಾವಾಗಾಲೂ ಸದೃಢವಾಗಿ ಇರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಎ ಹಾಗೂ 19 ವರ್ಷದೊಳಗಿನ ತಂಡದ ತರಬೇತು ದಾರರಾಗಿರುವ ರಾಹುಲ್ ದ್ರಾವಿಡ್, ಚೇತೇಶ್ವರ್ ಪೂಜಾರ್ ಅವರ ಅದ್ಬುತ ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸರಣಿಯಲ್ಲಿ ಚೇತೇಶ್ವರ್ ಪೂಜಾರ್ ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. ಎರಡು ಪಂದ್ಯಗಳಲ್ಲಿಯೂ ಉತ್ತಮ ರೀತಿಯಲ್ಲಿ ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾ ಗೆಲ್ಲಲು ಪ್ರಮುಖವಾದ ಪಾತ್ರ ವಹಿಸಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics