ಮೆಲ್ಬೋರ್ನ್: ಯಾವುದೇ ಕಾರಣಕ್ಕೂ ಈ ಬೌಲರ್ ನೊಂದಿಗೆ ಮುಖಾಮುಖಿಯಾಗಲು ಇಚ್ಛಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ಇಷ್ಟಕ್ಕೂ ಕೊಹ್ಲಿಯನ್ನೂ ಭಯಪಡಿಸಿರುವ ಬೌಲರ್ ಯಾರು ಗೊತ್ತಾ?
ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ವಿಶ್ವದ ಖ್ಯಾತನಾಮ ಬೌಲರ್ ಗಳೂ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಆದರೆ ಇಂತಹ ಕೊಹ್ಲಿ ಕೂಡ ಬೆಚ್ಚಿ ಬೀಳುವಂತೆ ಮಾಡುವ ಓರ್ವ ಬೌಲರ್ ಇದ್ದಾನೆ. ಹೌದು ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದು, ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲೇ ಎಂದಿಗೂ ಈ ಬೌಲರ್ ನೊಂದಿಗೆ ಮುಖಾಮುಖಿಯಾಗಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.
ಇಷ್ಟಕ್ಕೂ ವಿರಾಟ್ ಕೊಹ್ಲಿ ಹೇಳಿದ ಆ ಬೌಲರ್ ಯಾರೂ ಗೊತ್ತಾ..? ಮತ್ತಾರೂ ಅಲ್ಲ ಆಸಿಸ್ ನೆಲದಲ್ಲಿ ಪ್ರಬಲ ಕಾಂಗರೂಗಳ ನಿದ್ದೆಗೆಡಿಸಿರುವ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ.. ಹೌದು.. ಮೆಲ್ಬೋರ್ನ್ ನಲ್ಲಿ ನಿನ್ನೆ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಬರೊಬ್ಬರಿ 9 ವಿಕೆಟ್ ಪಡೆದು ಆಸಿಸ್ ಸೋಲಿಗೆ ಕಾರಣರಾದ ಜಸ್ ಪ್ರೀತ್ ಬುಮ್ರಾ ಅವರನ್ನು ವಿರಾಟ್ ಕೊಹ್ಲಿ ಅತ್ಯಂತ ಅಪಾಯಕಾರಿ ಬೌಲರ್ ಎಂದು ಬಣ್ಣಿಸಿದ್ದಾರೆ. ಅಂತೆಯೇ ತಾವು ವಿಶ್ವದಲ್ಲಿ ಎಂದಿಗೂ ಮುಖಾಮುಖಿಯಾಗಲು ಬಯಸದ ಏಕೈಕ ಬೌಲರ್ ಎಂದು ಬುಮ್ರಾ ಬೌಲಿಂಗ್ ಅನ್ನು ಶ್ಲಾಘಿಸಿದ್ದಾರೆ.
ನಿನ್ನೆ ಬಾಕ್ಸಿಂಗ್ ಡೇ ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ನಾನು ಮೈದಾನದಲ್ಲಿ ಯಾವುದೇ ಕಾರಣಕ್ಕೂ ಮುಖಾಮುಖಿಯಾಗಲು ಇಚ್ಛಿಸದ ಏಕೈಕ ಬೌಲರ್ ಎಂದರೆ ಅದು ಜಸ್ ಪ್ರೀತ್ ಬುಮ್ರಾ.. ಪ್ರಮುಖವಾಗಿ ಪರ್ತ್ ನಂತಹ ಪುಟಿದೇಲುವ ಪಿಚ್ ಗಳಲ್ಲಿ ಬುಮ್ರಾ ರಂತಹ ಬೌಲರ್ ಗಳು ಜಗತ್ತಿನ ಯಾವುದೇ ಬ್ಯಾಟ್ಸಮನ್ ಗಳಿಗೂ ಅಪಾಯಕಾರಿಯಾಗಿ ಕಾಣುತ್ತಾರೆ. ಎಂತಹ ಬಲಿಷ್ಠ ಬ್ಯಾಟ್ಸಮನ್ ಆದರೂ ಬುಮ್ರಾ ವೇಗಕ್ಕೆ ಗೊಂದಲಕ್ಕೀಡಾಗುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಟೆಸ್ಟ್ ಕ್ರಿಕೆಟ್ ಬುಮ್ರಾ ಸಾಧನೆ ನಿಜಕ್ಕೂ ಶ್ಲಾಘನೀಯ.. ಆತ ತುಂಬಾ ಪ್ರಬುದ್ಧನಾಗಿದ್ದು, ಬೌಲಿಂಗ್ ನಲ್ಲಿ ಪಳಗಿದ್ದಾನೆ. ಎಂತಹುದೇ ಒತ್ತಡವನ್ನೂ ನಿಭಾಯಿಸಿ ಯಶಸ್ಸು ಸಾಧಿಸುವ ಕಲೆ ಕರಗತವಾಗಿದೆ ಎಂದು ಹೇಳಿದ್ದಾರೆ.
ಮೆಲ್ಬೋರ್ನ್ ಜಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನಿಜಕ್ಕೂ ಈ ಪಂದ್ಯ ನಮಗೆ ತುಂಬಾ ಮುಖ್ಯವಾಗಿತ್ತು. ಮಾನಸಿಕವಾಗಿ ನಮಗೆ ಆತ್ಮಸ್ಥೈರ್ಯ ತುಂಬಿದ ಪಂದ್ಯ ಇದಾಗಿತ್ತು. ಪರ್ತ್ ಸೋಲಿನ ಬಳಿಕ ನಿಜಕ್ಕೂ ನಮ್ಮ ಮೇಲೆ ಒತ್ತಡವಿತ್ತು. ಬ್ಯಾಟ್ಸಮನ್ ಗಳು ಸಾಕಷ್ಟು ಬೆವರಿಸಿಳಿಸಿದ್ದರು. ಬೌಲರ್ ಗಳು ಸಾಕಷ್ಟು ಓವರ್ ಗಳನ್ನು ಎಸೆದು ದಣಿದಿದ್ದಾರೆ. ಇಲ್ಲಿನ್ ಪಿಚಟ್ ಗುಣವೇ ಹಾಗಿದೆ. ನಿಜಕ್ಕೂ ನಮ್ಮ ಬೌಲಿಂಗ್ ಪಡೆಗೆ ಗೆಲುವಿನ ಶ್ರೇಯ ಸಲ್ಲಬೇಕು ಎಂದು ಕೊಹ್ಲಿ ಹೇಳಿದ್ದಾರೆ.