ವಿರಾಟ್ ಕೊಹ್ಲಿ 
ಕ್ರಿಕೆಟ್

ಕೊಹ್ಲಿಗೆ ತಮ್ಮನ್ನು ಉತ್ತಮ ನಾಯಕನನ್ನಾಗಿ ಮಾಡುವ ಸಲಹೆಗಾರನ ಅಗತ್ಯವಿದೆ: ಆಫ್ರಿಕಾ ಮಾಜಿ ಕೋಚ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತಮ್ಮನ್ನು ಉತ್ತಮ ನಾಯಕನನ್ನಾಗಿ ಮಾಡುವ ಸಲಹೆಗಾರನ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ...

ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತಮ್ಮನ್ನು ಉತ್ತಮ ನಾಯಕನನ್ನಾಗಿ ಮಾಡುವ ಸಲಹೆಗಾರನ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕೋಚ್ ರೇ ಜೆನ್ನಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ. 
ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಇದರಿಂದಾಗಿ ಅವರಿಗೆ ಉತ್ತಮ ಮಾರ್ಗದರ್ಶಿ ಸಿಕ್ಕರೆ ಅವರು ಒಬ್ಬ ಉತ್ತಮ ನಾಯಕನಾಗುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಜೆನ್ನಿಂಗ್ಸ್ ಹೇಳಿದ್ದಾರೆ. 
ವಿರಾಟ್ ಕೊಹ್ಲಿ ಅಂಡರ್ 19 ಕ್ರಿಕೆಟ್ ನಿಂದ ಪ್ರಗತಿಯ ಮೆಟ್ಟಿಲೇರಿದ್ದನ್ನು ನಾನು ಕಂಡಿದ್ದೆ. ಇದೇ ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತುದಾರನಾಗಿದ್ದಾಗ ವರ್ತನೆಯನ್ನು ಕಂಡಿದ್ದೇನೆ ಇದರಿಂದಾಗಿ ಕೊಹ್ಲಿಯ ಸ್ವಭಾವನ ನನಗೆ ಚನ್ನಾಗಿ ತಿಳಿದಿದ್ದು ಅವರಿಗೆ ಒಬ್ಬ ಉತ್ತಮ ಮಾರ್ಗದರ್ಶಿಯ ಅವಶ್ಯಕತೆ ಇದೆ ಎಂದು ಜೆನ್ನಿಂಗ್ಸ್ ಹೇಳಿದ್ದಾರೆ. 
ವಿರಾಟ್ ಕೊಹ್ಲಿಗೆ ಉತ್ತಮ ನಾಯಕತ್ವದ ಗುಣಗಳಿವೆ ಎಂದು ನಾನು ಭಾವಿಸಲ್ಲ. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವೆ ತೀವ್ರ ಬದಲಾವಣೆಗಳಿವೆ. ಧೋನಿ ತುಂಬ ಶಾಂತ ಸ್ವಭಾವದವರಾದರೇ ಕೊಹ್ಲಿ ಅದಕ್ಕೆ ತದ್ವಿರುದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. 
ವಿರಾಟ್ ಕೊಹ್ಲಿ ಯುವಕರಲ್ಲಿ ಭಯವನ್ನು ಹುಟ್ಟುಹಾಕಬಹುದು. ಹೀಗಾಗಿ ಅವರಿಗೆ ಶಾಂತ ಸ್ವಭಾವದ ಮಾರ್ಗದರ್ಶಿಯ ಸಲಹೆ ಬೇಕಾಗುತ್ತದೆ ಎಂದು ಜೆನ್ನಿಂಗ್ಸ್ ಹೇಳಿದ್ದಾರೆ. 
ವಿರಾಟ್ ಕೊಹ್ಲಿಯದ್ದು ಆಕ್ರಮಣಕಾರಿ ವರ್ತನೆ ಎಂಬುದು ಎಲ್ಲರಿಗೂ ತಿಳಿದಿದೆ. ತಂಡದ ನಾಯಕನಾಗಿ ಆಯ್ಕೆಯಾಗುವ ಮುನ್ನ ಅವರು ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗಳನ್ನು ಎಲ್ಲರೂ ಕಂಡಿದ್ದಾರೆ. ಆದರೆ ನಾಯಕನಾದ ಬಳಿಕ ಕೊಹ್ಲಿಯ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಗಳು ಆಗಿರುವುದನ್ನು ಗಮನಿಸಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!