ಕ್ರಿಕೆಟ್

ಇವರು ಯಾರೆಂದು ಗುರುತಿಸುವಿರಾ? ವ್ಲಾದಿಮಿರ್ ಪುಟೀನಾ, ನಾಸ್ಸಿರ್ ಹುಸೇನಾ!

Vishwanath S
ಮುಂಬೈ: ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಫೋಟೋವೊಂದನ್ನು ಟ್ವೀಟ್ ಮಾಡಿದ್ದು ಈ ಫೋಟೋ ಇದೀಗ ಟ್ವೀಟರ್ ನಲ್ಲಿ ಕೋಲಾಹಲ ಸೃಷ್ಟಿಸಿದೆ. 
ಬಟ್ಲರ್ ತಮ್ಮ ಟ್ವೀಟರ್ ನಲ್ಲಿ ಯಾರಾದರೂ ಇವರು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಎಂದು ಗುರುತಿಸಬಲ್ಲಿರಾ? ಎಂದು ಅಡಿ ಬರಹ ಬರೆದಿದ್ದಾರೆ. ಇದಕ್ಕೆ ಕೆಲ ಟ್ವೀಟರಿಗರು ಇದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲ್ಲ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟೀನ್ ಎನ್ನುತ್ತಿದ್ದಾರೆ. ಇನ್ನು ಕೆಲವರು ಇವರು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸ್ಸಿರ್ ಹುಸೇನ್ ಎಂದು ರೀಟ್ವೀಟ್ ಮಾಡುತ್ತಿದ್ದಾರೆ.
ಈ ಫೋಟೋದಲ್ಲಿರುವುದು ನಿಜಕ್ಕೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸ್ಸಿರ್ ಹುಸೇನ್. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟಿಜೆನ್ಸ್ ಗಳು ನಗೆಯ ಚಟಾಕಿಯನ್ನು ಹರಿಸುತ್ತಿದ್ದಾರೆ. 
SCROLL FOR NEXT