ಕ್ರಿಕೆಟ್

ಮಾಯಾಂಕ್ ಸ್ಫೋಟಕ ಬ್ಯಾಟಿಂಗ್, ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

Vishwanath S
ನವದೆಹಲಿ: ಸ್ಫೋಟಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ 41 ರನ್ ಗಳಿಂದ ಗೆದ್ದು ಟ್ರೋಫಿ ಮುಡಿಗೇರಿಸಿಕೊಂಡಿತು. 
ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ 253 ರನ್ ಗಳಿಗೆ ಸರ್ವಪತನ ಕಂಡಿತು. 254 ರನ್ ಗಳ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಚೇತೇಶ್ವರ ಪೂಜಾರ 94 ರನ್ ಗಳ ಭರ್ಜರಿ ಬ್ಯಾಟಿಂಗ್ ನಡುವೆಯೂ ತಂಡ 41 ರನ್ ಗಳಿಂದ ಕರ್ನಾಟಕಕ್ಕೆ ಶರಣಾಯಿತು. 
ಐದು ವರ್ಷಗಳಲ್ಲಿ ಕರ್ನಾಟಕ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡು ದಾಖಲೆ ಬರೆದಿದೆ. 
ಕರ್ನಾಟಕ ಪರ ಮಾಯಾಂಕ್ ಅಗರವಾಲ್ 90, ಸಮರ್ಥ್ 48, ದೇಶ್ ಪಾಂಡೆ 49 ಮತ್ತು ಗೋಪಾಲ್ 31 ರನ್ ಗಳಿಸಿದ್ದಾರೆ. ಸೌರಾಷ್ಟ್ರ ಪರ ಬೌಲಿಂಗ್ ನಲ್ಲಿ ಮಕ್ವಾನಾ 4, ಮಂಕಡ್ 2 ವಿಕೆಟ್ ಪಡೆದಿದ್ದಾರೆ. 
ಸೌರಾಷ್ಟ್ರ ಪರ ಬ್ಯಾಟಿಂಗ್ ನಲ್ಲಿ ಬರೋಟ್ 30, ಚೇತೇಶ್ವರ ಪೂಜಾರ 94, ಜಾನಿ 22 ಮತ್ತು ಮಕ್ವಾನಾ ಅಜೇಯ 20 ರನ್ ಗಳಿಸಿದ್ದಾರೆ. ಕರ್ನಾಟಕ ಪರ ಬೌಲಿಂಗ್ ನಲ್ಲಿ ಪ್ರಸಿದ್ ಕೃಷ್ಣ ಮತ್ತು ಗೌತಮ್ ತಲಾ 3 ವಿಕೆಟ್ ಪಡೆದಿದ್ದಾರೆ. 
SCROLL FOR NEXT