ಕ್ರಿಕೆಟ್

ಶಿಖರ್ ಧವನ್ 'ಹರಕೆಯ ಕುರಿ': ಟೀಂ ಇಂಡಿಯಾ ಆಯ್ಕೆ ಪ್ರಶ್ನಿಸಿದ ಗವಾಸ್ಕರ್

Lingaraj Badiger
ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆಯನ್ನು ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಪ್ರಶ್ನಿಸಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಯಾವಗಲೂ 'ಹರಕೆಯ ಕುರಿ' ಆಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎರಡನೇ ಟೆಸ್ಟ್ ಗಾಗಿ ಭಾರತ ಮೂರು ಬದಲಾವಣೆಗಳನ್ನು ಮಾಡಿದ್ದು, ಎಡಗೈ ಓಪನರ್ ಶಿಖರ್ ಧವನ್, ಬಲಗೈ ವೇಗಿ ಭುವನೇಶ್ವರ್ ಕುಮಾರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರನ್ನು ಕೈಬಿಟ್ಟು, ಅವರ ಬದಲಿಗೆ ಅನುಕ್ರಮವಾಗಿ ಕೆಎಲ್ ರಾಹುಲ್, ಇಶಾಂತ್ ಶರ್ಮಾ ಮತ್ತು ಪಾರ್ಥಿವ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಶಿಖರ್ ಧವನ್ ಹರಕೆ ಕುರಿಯಾಗುತ್ತಿದ್ದಾರೆ. ಅವರ ತಲೆ ಯಾವಾಗಲೂ ಕುಯ್ಯುವ ವಿಭಾಗದಲ್ಲಿರುತ್ತದೆ. ಕೇವಲ ಒಂದು ಟೆಸ್ಟ ಪಂದ್ಯದ ವೈಫಲ್ಯದಿಂದಾಗಿ ಧವನ್ ಅವರನ್ನು ತಂಡದಿಂದ ಹೊರಗಟ್ಟಲಾಗಿದೆ ಎಂದು ಗವಾಸ್ಕರ್ ಟೀಕಿಸಿದ್ದಾರೆ.
ಇನ್ನು ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಇಶಾಂತ್ ಶರ್ಮಾ ಆಯ್ಕೆಯನ್ನು ಗವಾಸ್ಕರ್ ಪ್ರಶ್ನಿಸಿದ್ದು, ಕೇಪ್ ಟೌನ್ ಟೆಸ್ಟ್ ಪಂದ್ಯದ ಮೊದಲ ದಿನದ ಆರಂಭದಲ್ಲೇ ಭುವಿ ಮೂರು ವಿಕೆಟುಗಳನ್ನು ಕಬಳಿಸಿದ್ದರು. ಹಾಗೇನಾದರೂ ಇಶಾಂತ್‌ಗೆ ಅವಕಾಶ ನೀಡಬೇಕಾದರೆ ಮೊಹಮ್ಮದ್ ಶಮಿ ಅಥವಾ ಜಸ್ಪ್ರೀತ್ ಬುಮ್ರಾ ಅವರ ಬದಲು ಪರಿಗಣಿಸಬಹುದಿತ್ತು. ಈ ಎಲ್ಲ ನಿರ್ಧಾರವು ನನಗೆ ಅರ್ಥವೇ ಆಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
SCROLL FOR NEXT