ಸಂಗ್ರಹ ಚಿತ್ರ 
ಕ್ರಿಕೆಟ್

ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದರೆ ಭಾರತಕ್ಕೆ ಅಗ್ರಸ್ಥಾನ!

ಟೆಸ್ಟ್ ಸರಣಿ ಸೋತರೂ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿರುವ ಭಾರತ ತಂಡಕ್ಕೆ ಏಕದಿನ ರ‍್ಯಾಂಕಿಂಗ್ ನಲ್ಲಿಯೂ ಅಗ್ರ ಸ್ಥಾನಕ್ಕೇರುವ ಅವಕಾಶವೊಂದು ಬಂದಿದೆ.

ಮುಂಬೈ: ಟೆಸ್ಟ್ ಸರಣಿ ಸೋತರೂ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿರುವ ಭಾರತ ತಂಡಕ್ಕೆ ಏಕದಿನ ರ‍್ಯಾಂಕಿಂಗ್ ನಲ್ಲಿಯೂ ಅಗ್ರ  ಸ್ಥಾನಕ್ಕೇರುವ ಅವಕಾಶವೊಂದು ಬಂದಿದೆ.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆತಿಥೇಯರನ್ನು ಭಾರತ ಮಣಿಸಿ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡರೆ ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲೂ ಟೀಂ ಇಂಡಿಯಾ ನಂ. 1 ಪಟ್ಟಕ್ಕೇರುವ ಅವಕಾಶ  ಹೊಂದಿದೆ. ಒಟ್ಟು ಆರು ಪಂದ್ಯಗಳ ಏಕದಿನ ಸರಣಿಗೆ ಗುರುವಾರ ಡರ್ಬನ್ ​ನಲ್ಲಿ ಚಾಲನೆ ಸಿಗಲಿದ್ದು, ಹಾಲಿ ಏಕದಿನ ರ‍್ಯಾಂಕಿಂಗ್ ​ನಲ್ಲಿ ದಕ್ಷಿಣ ಆಫ್ರಿಕಾ 120 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಂತೆಯೇ ಭಾರತ ತಂಡ 119  ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದು, ಈ ಸರಣಿಯನ್ನು ಭಾರತ ಜಯಿಸಿದಕೆ ಭಾರತದ ಅಂಕಗಳಿಕೆ 120ಕ್ಕೆ ಏರಲಿದ್ದು, ಸರಣಿ ಸೋಲಿನಿಂದ ದಕ್ಷಿಣ ಆಫ್ರಿಕಾದ ಅಂಕಗಳಿಕೆ ಇಳಿಕೆಯಾಗಲಿದೆ ಎಂದು ಕ್ರಿಕೆಟ್ ತಜ್ಞರು ಅಂದಾಜಿಸಿದ್ದಾರೆ.
ಈಗಾಗಲೇ ಜೊಹಾನ್ಸ್​ಬರ್ಗ್ ಟೆಸ್ಟ್ ಗೆಲುವಿನಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ತಂಡ, ಏಕದಿನ ಸರಣಿಯಲ್ಲಿ ಕನಿಷ್ಠ 4-2ರಿಂದ ಗೆದ್ದರೆ ಆಗ ತಂಡದ ಅಂಕಗಳಿಕೆ 121ಕ್ಕೆ ಏರಿಕೆಯಾಗಲಿದೆ. ಆಗ  ದಕ್ಷಿಣ ಆಫ್ರಿಕಾ ಅಂಕಗಳಿಕೆ 119ಕ್ಕೆ ಕುಸಿದು, ಆ ತಂಡ 2ನೇ ಸ್ಥಾನಕ್ಕೆ ಕುಸಿತ ಕಾಣಲಿದೆ. ಒಂದು ವೇಳೆ ಭಾರತ 5-1 ಅಥವಾ 6-0 ಜಯ ಕಂಡರೆ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ. 
ಒಂದು ವೇಳೆ ಸರಣಿ 3-3ರಿಂದ ಸಮಬಲಗೊಂಡರೆ ಉಭಯ ತಂಡಗಳು ತಲಾ 120 ಅಂಕ ಹೊಂದಲಿದ್ದು, ಆಗ ಭಾರತ ತಂಡ 2ನೇ ಸ್ಥಾನದಲ್ಲೇ ಉಳಿಯಲಿದೆ. ಒಂದು ವೇಳೆ ಭಾರತ ತಂಡ  2-4ರಿಂದ ಸರಣಿ ಸೋತರೆ ತಂಡದ  ಅಂಕಗಳಿಕೆ 118ಕ್ಕೆ ಕುಸಿಯಲಿದ್ದು, ಆಗಲೂ ಟೀಂ ಇಂಡಿಯಾ 2ನೇ ಸ್ಥಾನದಲ್ಲೇ ಉಳಿಯಲಿದೆ.
ಆದರೆ ಸರಣಿಯಲ್ಲಿ ಭಾರತ ತಂಡ ವೈಟ್ ​ವಾಶ್ ಮುಖಭಂಗ ಎದುರಿಸಿದರೆ ಮಾತ್ರ ಭಾರತದ ಅಂಕಗಳಿಕೆ 115ಕ್ಕೆ ಕುಸಿದು ರ‍್ಯಾಂಕಿಂಗ್ ಕೂಡ ನಾಲ್ಕನೇ ಸ್ಥಾನಕ್ಕೆ ಕುಸಿತ ಕಾಣಲಿದೆ. ಅಂದರೆ ಪಟ್ಟಿಯಲ್ಲಿ ಇಂಗ್ಲೆಂಡ್ (116)  ಮತ್ತು ನ್ಯೂಜಿಲೆಂಡ್ (115) ತಂಡಗಳಿಗಿಂತ ಭಾರತ ಕೆಳಗೆ ಕುಸಿತ ಕಾಣಲಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ (112) ಈಗ 5ನೇ ಸ್ಥಾನಕ್ಕೆ ಕುಸಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಮೇಲೆ ಬೆರಳು ತೋರಿಸೋದು ನಿಮ್ಮ ಹಳೆಯ ಚಾಳಿ, ಆರೋಪ ಮಾಡೋದು ಬಿಟ್ಟು ಆಂತರಿಕ ಭದ್ರತಾ ವೈಫಲ್ಯಗಳತ್ತ ಗಮನಹರಿಸಿ: ಪಾಕ್'ಗೆ ಭಾರತ ತಿರುಗೇಟು

ದಕ್ಷಿಣ ಪಿನಾಕಿನಿ ಜಲವಿವಾದ ಪ್ರಕರಣ: ನ್ಯಾಯಮಂಡಳಿ ಸ್ಥಾಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

ಪತಿಯ ಅಂತ್ಯಕ್ರಿಯೆ ಪೂರ್ಣಗೊಳ್ಳುವ ಮೊದಲೇ ಸುನೇತ್ರಾ ಪವಾರ್ DCM ಆಗಿ ನೇಮಕಗೊಂಡಿರುವುದರ ಹಿಂದೆ ಬಿಜೆಪಿ 'ಮಾಸ್ಟರ್ ಮೈಂಡ್' ಕೈವಾಡ!

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’: ಮೈಲಾರಲಿಂಗನ ಕಾರ್ಣಿಕ, ರೈತರ ಸಂತಸ? Video

ಬಲೂಚಿಸ್ತಾನದಲ್ಲಿ ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆ: 145 ಭಯೋತ್ಪಾದಕರ ಹತ್ಯೆಗೈದಿದ್ದೇವೆಂದ ಪಾಕಿಸ್ತಾನ, ಭಾರತ-ಆಫ್ಘನ್ ವಿರುದ್ಧ ಗಂಭೀರ ಆರೋಪ

SCROLL FOR NEXT