Cricket 
ಕ್ರಿಕೆಟ್

ಅಪರೂಪದಲ್ಲಿ ಅಪರೂಪ ದಾಖಲೆ: ಒಂದೇ ಪಂದ್ಯದಲ್ಲಿ ಶತಕ, ಹ್ಯಾಟ್ರಿಕ್ ವಿಕೆಟ್ ಪಡೆದು ಕ್ರಿಕೆಟಿಗನ ಸಾಧನೆ!

ಕ್ರಿಕೆಟ್ ನಲ್ಲಿ ದಾಖಲೆ ಮಾಡಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಅದೇ ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆಗಳನ್ನು ಬರೆದಾಗ ಅಂತಹ ಆಟಗಾರ ಖುಷಿಗೆ ಪಾರವೇ ಇರುವುದಿಲ್ಲ...

ಲಂಡನ್: ಕ್ರಿಕೆಟ್ ನಲ್ಲಿ ದಾಖಲೆ ಮಾಡಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಅದೇ ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆಗಳನ್ನು ಬರೆದಾಗ ಅಂತಹ ಆಟಗಾರ ಖುಷಿಗೆ ಪಾರವೇ ಇರುವುದಿಲ್ಲ. 
ಕ್ರಿಕೆಟ್ ನಲ್ಲಿ ಶತಕ ಬಾರಿಸುವುದು, ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಬ್ಯಾಟ್ಸ್ ಮನ್ ಹಾಗೂ ಬೌಲರ್ ನ ಆಸೆಯಾಗಿರುತ್ತದೆ. ಒಂದೇ ಪಂದ್ಯದಲ್ಲಿ ಒಬ್ಬನೇ ಆಟಗಾರನೊಬ್ಬ ಶತಕ, ಹ್ಯಾಟ್ರಿಕ್ ವಿಕೆಟ್ ಪಡೆದು ಅಪರೂಪದ ದಾಖಲೆಯನ್ನು ಮಾಡಿದ್ದಾರೆ.
ಇಂಗ್ಲೆಂಡ್ ಕೌಂಟಿ ತಂಡವಾದ ಕೆಂಟ್ ನ ಜೋಸೆಫ್ ಡೆನ್ಲೆ ಈ ಸಾಧನೆ ಮಾಡಿದ ಆಟಗಾರ. ಸರ್ರೆ ವಿರುದ್ಧ ಟಿ20 ಪಂದ್ಯದಲ್ಲಿ ಮೊದಲು 63 ಎಸೆತಗಳಲ್ಲಿ 102 ರನ್ ಗಳಿಸಿದ ಡೆನ್ಲಿ, ಬಳಿಕ 13ನೇ ಓವರ್ ನ ಕೊನೆಯ 3 ಎಸೆತಗಳಲ್ಲಿ 3 ವಿಕೆಟ್ ಕಬಳಿಸಿ ಹ್ಯಾಟ್ರಿಕ್ ವಿಕೆಟ್ ಸಾಧನೆಗೈದರು. 
ಟಿ20 ಇಲ್ಲವೇ ಏಕದಿನ ಕ್ರಿಕೆಟ್ ನಲ್ಲಿ ಆಟಗಾರನೊಬ್ಬ ಶತಕ ಬಾರಿಸಿ, ಹ್ಯಾಟ್ರಿಕ್ ಪಡೆದಿದ್ದು ಇದೇ ಮೊದಲು ಮತ್ತೊಂದು ವಿಶೇಷ ಅಂದರೆ ಡೆನ್ಲೆ ತಂಡದ ಪರ ಬ್ಯಾಟಿಂಗ್, ಬೌಲಿಂಗ್ ಆರಂಭಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT