MS Dhoni-Virat Kohli 
ಕ್ರಿಕೆಟ್

ಎಂಎಸ್ ಧೋನಿ ಈಗಲೂ ಟೀಂ ಇಂಡಿಯಾದ ಅಧಿಕೃತ ನಾಯಕ, ಮತ್ತೆ ವಿರಾಟ್ ಕೊಹ್ಲಿ ಕಥೆ ಏನು?

2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಸರಣಿಗಳನ್ನು ಗೆಲ್ಲಿಸಿಕೊಟ್ಟ ಟೀಂ ಇಂಡಿಯಾದ ಮಾಜಿ ನಾಯಕ...

ಮುಂಬೈ: 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಸರಣಿಗಳನ್ನು ಗೆಲ್ಲಿಸಿಕೊಟ್ಟ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ರಾಜಿನಾಮೆ ನೀಡಿದ ನಂತರವೂ ಬಿಸಿಸಿಐನ ವೆಬ್ ಸೈಟ್ ನಲ್ಲಿ ಮಾತ್ರ ಈಗಲು ಧೋನಿಯೇ ತಂಡದ ಅಧಿಕೃತ ನಾಯಕ ಎಂದರೆ ನೀವು ನಂಬುತ್ತೀರಾ.
ಹೌದು, ಇಂತಹ ಯಡವಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರಣವಾಗಿದೆ. ಬಿಸಿಸಿಐನ ಅಧಿಕೃತ ವೆಬ್ ಸೈಟ್ ನಲ್ಲಿ ಎಂಎಸ್ ಧೋನಿಯನ್ನು ಟೀಂ ಇಂಡಿಯಾದ ನಾಯಕ ಎಂದೇ ನಮೂದಿಸಲಾಗಿದೆ. ಪ್ಲೇಯರ್ ಪ್ರೊಫೈಲ್ ನಲ್ಲಿ ಎಂಎಸ್ ಧೋನಿ ಟೀಂ ಇಂಡಿಯಾ ನಾಯಕ ಎಂದು ದಾಖಲಿಸಿದ್ದಾರೆ. 
ಎಂಎಸ್ ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 2017ರಲ್ಲಿ ಏಕದಿನ ಹಾಗೂ ಟಿ20 ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈಗಿದ್ದರು ಬಿಸಿಸಿಐ ಮಾತ್ರ ತನ್ನ ವೆಬ್ ಸೈಟ್ ನಲ್ಲಿ ಧೋನಿಯೇ ನಾಯಕ ಎಂದು ದಾಖಲಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!