ಕ್ರಿಕೆಟ್

ವಿರೋಧ, ವಿವಾದಗಳ ನಡುವೆಯೇ ಡಿಡಿಸಿಎ ಸಮಿತಿಗೆ ಗಂಭೀರ್, ಸೆಹ್ವಾಗ್ ಸೇರ್ಪಡೆ

Srinivasamurthy VN
ನವದೆಹಲಿ: ವಿರೋಧ ಮತ್ತು ವಿವಾದಗಳ ನಡುವೆಯೇ ದೆಹಲಿ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಸಮಿತಿಯಲ್ಲಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಆಯ್ಕೆಯಾಗಿರುವುದು ಹಲವರ ಹುಬ್ಬೇರಿಸಿದೆ.
ಈಗಾಗಲೇ ಡಿಡಿಸಿಎ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮತ್ತು ರಾಹುಲ್ ಸಂಘ್ವಿ ಇದ್ದು, ಇವರೊಂದಿಗೆ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಕೂಡ ಸ್ಥಾನಗಳಿಸಿದ್ದಾರೆ. ದೆಹಲಿ ಕ್ರಿಕೆಟ್ ಸಂಸ್ಥೆಯ ಕೋಚ್ ಗಳ ಆಯ್ಕೆ, ಆಯ್ಕೆದಾರರ ಆಯ್ಕೆ ಮತ್ತು ಕ್ರಿಕೆಟಿಗೆ ಸಂಬಂಧಿಸಿದ ವಿಚಾರಗಳ ಕುರಿತು ನಿರ್ಣಯ ಕೈಗೊಳ್ಳಲು ಈ ಸಮಿತಿಗೆ ಅಧಿಕಾರವಿರುತ್ತದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಅವರು, ಲೋಧಾ ಸಮಿತಿ ಶಿಫಾರಸ್ಸಿನಂತೆಯೇ ಡಿಡಿಸಿಎ ಸಮಿತಿ ರಚನೆ ಮಾಡಲಾಗಿದ ಎಂದು ಹೇಳಿದ್ದಾರೆ. ಇನ್ನು ಸೆಹ್ವಾಗ್ ಮತ್ತು ಗಂಭೀರ್ ಆಯ್ಕೆ ಸಂಬಂಧ ಈಗಾಗಲೇ ಹಲವರು ವಿರೋಧ ವ್ಯಕ್ತಪಡಿಸಿದ್ದರು. ವರ್ಷದ ಹಿಂದೆ ರಜತ್ ಶರ್ಮಾ ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸಂದರ್ಭದಲ್ಲೇ ಗಂಭೀರ್ ಗೆ ಡಿಡಿಸಿಎಯನಲ್ಲಿ ಸ್ಥಾನ ಸಿಗಬಹುದು ಎಂದು ಕೆಲವರು ಅಂದಾಜಿಸಿದ್ದರು. 
ಇನ್ನು ಸೆಹ್ವಾಗ್ ಈಗಾಗಲೇ ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯನ್ನು ಹೊಂದಿದ್ದು, ಅಲ್ಲದೆ ವಾಹಿನಿಯೊಂದರಲ್ಲಿ ಕ್ರಿಕೆಟ್ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಈ ವಾಹಿನಿಯು ದೆಹಲಿ ಕ್ರಿಕೆಟ್ ಸಂಸ್ಥೆಯ ಅದ್ಯಕ್ಷರಾದ ರಜತ್ ಶರ್ಮಾ ಒಡೆತನದ್ದು ಎಂದು ಕೇಳಿಬಂದಿದೆ. ಇನ್ನು ಸಮಿತಿಯ ಇತರೆ ಸದಸ್ಯರಾದ ಗಂಭೀರ್ ಐಪಿಎಲ್ ನಲ್ಲಿ ದೆಹಲಿ ತಂಡವನ್ನು ಪ್ರತಿನಿಥಿಸುತ್ತಿದ್ದಾರೆ. ಸಂಘ್ವಿ ಐಪಿಎಲ್ ನ ಮುಂಬೈ ತಂಡದ ಫ್ರಾಂಚೈಸಿಗಳಾಗಿದ್ದು, ಆಕಾಶ್ ಚೋಪ್ರಾ ವಿವಿಧ ಚಾನೆಲ್ ಗಳಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ಇದೇ ಕಾರಣಕ್ಕೆ ರಜತ್ ಶರ್ಮಾ ತಮ್ಮ 'ಸ್ವಹಿತಾಸಕ್ತಿ'ಗಾಗಿ ಡಿಡಿಸಿಎಗೆ ತಮಗೆ ಬೇಕಾದವರನ್ನೇ ಆಯ್ಕ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
SCROLL FOR NEXT