ಕ್ರಿಕೆಟ್

2019ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲು ಡೇಲ್ ಸ್ಟೈನ್ ಚಿಂತನೆ

Raghavendra Adiga
ಕೇಫ್ ಟಔನ್(ದಕ್ಷಿಣ ಆಫ್ರಿಕಾ): ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾದ ವೇಗದ ಬೌಲರ್  ಡೇಲ್ ಸ್ಟೈನ್ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ.
"ತನ್ನ ಅನುಭವ ವಿಶ್ವಕಪ್ ತಂಡದಲ್ಲಿ ಸ್ಥಾನಗಳಿಸಿಕೊಳ್ಳಲು ನೆರವಾಗಲಿದೆ ಎನ್ನುವ ಭರವಸೆ ನನಗಿದೆ, ಆದರೆ ಈ ವಿಶ್ವಕಪ್ ಮುಗಿದ ಬಳಿಕ ಮತ್ತೆ ನಾನು ದಕ್ಷಿಣ ಆಫ್ರಿಕಾ ಪರವಾಗಿ ಬಿಳಿ ಚೆಂಡಿನೊಂದಿಗೆ ಕ್ರಿಕೆಟ್ ಆಡಲು ಬಯಸುವುದಿಲ್ಲ."  ಡೇಲ್ ಸ್ಟೈನ್ ಹೇಳಿದ್ದಾರೆ.
ಇತ್ತೀಚೆಗೆ ಪದೇ ಪದೇ ಗಾಯದ ಸಮಸ್ಯೆಗೆ ಈಡಾಗುತ್ತಿರುವ ಸ್ಟೈನ್ "ನಾನು ಇನ್ನೊಂದು ವಿಶ್ವಕಪ್ ಪ್ರಾರಂಭವಾಗುವ ವೇಳೆಗೆ ನಲವತ್ತರ ಗಡಿ ಮುಟ್ಟಿರುತ್ತೇನೆ" ಎಂದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಅಗ್ರ ಶ್ರೇಯಾಂಕದ ಆಟಗಾರರಿಗೆ ಉತ್ತಮ ಆಟವಾಡುವ ಅನುಭವವಿದೆ, ಆದರೆ ಕೆಳ ಕ್ರಮಾಂಕದ ಆಟಗಾರರಿಗೆ ಅನುಭವ ಕೊರತೆ ಇದೆ.. ಇದೇ ಕಾರಣಕ್ಕೆ ನಾನು ವಿಶ್ವಕಪ್ ಆಯ್ಕೆ ಪ್ರಶ್ನೆ ಬಂದಾಗ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ. ವಿಶ್ವಕಪ್‌ನಲ್ಲಿ ನನ್ನ ಅನುಭವ ನೆರವಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಟೈನ್ ಟೆಸ್ಟ್ ಕ್ರಿಕೆಟ್ ಮುಂದುವರಿಯುವುದಾಗಿ ಹೇಳಿದ್ದಾರೆ.35 ವರ್ಷದ ಕ್ರಿಕೆಟಿಗ ಇದುವರೆಗೆ 115 ಏಕದಿನ ಪಂದ್ಯಗಳನ್ನಾಡಿ 8.28  ಸರಾಸರಿಯಲ್ಲಿ 298 ರನ್ ಕಲೆಹಾಕಿದ್ದಾರೆ. ಅಲ್ಲದೆ ಏಕದಿನ ಬೌಲಿಂಗ್ ನಲ್ಲಿ ಒಟ್ಟಾರೆ 180 ವಿಕೆಟ್ ಗಳಿಸಿದ್ದಾರೆ. ಇನ್ನು ಟೆಸ್ಟ್ ನಲ್ಲಿ ಆಡಿರುವ 88 ಪಂದ್ಯಗಳಲ್ಲಿ 1194 ರನ್ ಹಾಗೂ 421 ವಿಕೆಟ್ ಗಳಿಸಿಕೊಂಡಿದ್ದಾರೆ.
SCROLL FOR NEXT