ಕ್ರಿಕೆಟ್

ಸೇನೆ ವಿರುದ್ಧ ಹಗುರವಾಗಿ ಮಾತನಾಡುವ ರಾಜಕಾರಣಿಗಳು ಕಾಶ್ಮೀರದಲ್ಲಿ 1 ವಾರ ವಾಸಿಸಲಿ: ಗಂಭೀರ್

Vishwanath S
ನವದೆಹಲಿ: ಕಾಶ್ಮೀರ ಸಮಸ್ಯೆ ಮತ್ತು ಭಾರತೀಯ ಯೋಧರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡುವವರಿಗೆ ಎಚ್ಚರಿಕೆ ನೀಡಿರುವ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸುವ ಅಭ್ಯರ್ಥಿಗಳು ಒಂದು ವಾರ ಕಾಶ್ಮೀರದಲ್ಲಿ ವಾಸಿಸಲಿ ಆಗ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. 
ಕಾಶ್ಮೀರದಲ್ಲಿ ಭಾರತೀಯ ಸೇನೆ ಅನುಭವಿಸುತ್ತಿರುವ ಸಮಸ್ಯೆಗಳು, ಕಾಶ್ಮೀರಿಗರು ನಡೆಸುತ್ತಿರುವ ಕಲ್ಲು ತೂರಾಟ, ಭಯೋತ್ಪಾದಕತೆಯನ್ನು ನಿಲ್ಲಿಸುವ ಕೆಲಸದಲ್ಲಿ ಭಾರತೀಯ ಸೇನೆಗೆ ಕಾಶ್ಮೀರ ಜನತೆ ಅಡ್ಡಿಪಡಿಸುತ್ತಿರುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳ ನಡುವೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರದ ಮೂಲಕ ಉಗ್ರರನ್ನು ಹೊಡೆದುರುಳಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದ್ದಾರೆ. 
ಕಾಶ್ಮೀರದ ಸಮಸ್ಯೆ ಹಾಗೂ ಸೈನಿಕರು ಅನುಭವಿಸುವ ಸಮಸ್ಯೆಗಳನ್ನು ತಿಳಿಯಬೇಕಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ತಮ್ಮ ಪರಿವಾರ ಸಹಿತ ಕಾಶ್ಮೀರದಲ್ಲಿ ಒಂದು ವಾರ ವಾಸಿಸಬೇಕು ಅದೂ ಕೂಡ ಯಾವುದೇ ಪೊಲೀಸ್ ಅಥವಾ ಸೇನೆಯ ಭದ್ರತೆ ಇಲ್ಲದೆಯೇ, ಆಗ ತಿಳಿಯುತ್ತದೆ ಈ ರಾಜಕಾರಣಿಗಳಿಗೆ ಅಲ್ಲಿನ ಸಮಸ್ಯೆಗಳು ಏನು ಎಂಬುದು ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಭಾರತೀಯ ಸೇನೆಯ ಸಿಆರ್ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿಆರ್ಪಿಎಫ್ ವಾಹನವನ್ನು ವೇಗವಾಗಿ ಓಡಿಸಲಾಯಿತು. ಈ ವೇಳೆ ವಾಹನದ ಅಡಿಯಲ್ಲಿ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದು ಈ ವಿಚಾರ ಕುರಿತಂತೆ ದೇಶಾದ್ಯಂತ ವ್ಯಾಪಕ ಚರ್ಚೆಯಾಗಿತ್ತು.
SCROLL FOR NEXT