ಪೂನಮ್ ಯಾದವ್ 
ಕ್ರಿಕೆಟ್

ಐಸಿಸಿ ಮಹಿಳಾ ಟಿ20 ಶ್ರೇಣಿ: ಟಾಪ್ 5 ರಲ್ಲಿ ಸ್ಥಾನ ಗಿಟ್ಟಿಸಿದ ಪೂನಮ್ ಯಾದವ್

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಪೂನಮ್ ಯಾದವ್ ಐಸಿಸಿ ಮಹಿಳಾ ಟಿ20 ಶ್ರೇಣಿಯ ಟಾಪ್ 5 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಪೂನಮ್ ಯಾದವ್  ಐಸಿಸಿ ಮಹಿಳಾ ಟಿ20 ಶ್ರೇಣಿಯ ಟಾಪ್ 5 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 
ಮಹಿಳಾ ವಿಭಾಗದಲ್ಲಿ ವಿಶ್ವಕ್ಕೆ ಟಾಪ್ 3 ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪೂನಮ್ ಯಾದವ್ ಪಾತ್ರರಾಗಿದ್ದು, ಆಸ್ಟ್ರೇಲಿಯಾದ ಪೇಸರ್ ಮೇಗನ್ ಸ್ಕಟ್ ಹಾಗೂ ನ್ಯೂ ಜಿಲ್ಯಾಂಡ್ ನ ಆಫ್ ಸ್ಪಿನ್ನರ್  ಲೀ ಕ್ಯಾಸ್ಪೆರೆಕ್ ನಂತರದ ಸ್ಥಾನದಲ್ಲಿ ಲೆಗ್ ಸ್ಪಿನ್ನರ್ ಪೂನಮ್ ಯಾದವ್ ಇದ್ದಾರೆ.  ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮಹಿಳಾ ಏಷ್ಯಾ ಟಿ20  ಕಪ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ನಂತರ  ಪೂನಮ್ ಯಾದವ್ ಐಸಿಸಿ ಮಹಿಳಾ ಟಿ20 ಶ್ರೇಣಿಯಲ್ಲಿ ಟಾಪ್ 3 ನೇ ಬೌಲರ್ ಸ್ಥಾನಕ್ಕೇರಿದ್ದಾರೆ. 
ಮಹಿಳಾ ಏಷ್ಯಾ ಟಿ20  ಕಪ್ ಸರಣಿಯ ವಿಜೇತ ತಂಡ ಬಾಂಗ್ಲಾದೇಶದ ರುಮಾನಾ ಅಹ್ಮದ್ ಆಲ್ ರೌಂಡರ್ ಗಳ ಪಟ್ಟಿಯಲ್ಲಿ 12 ನೇ ಸ್ಥಾನಕ್ಕೇರಿದ್ದಾರೆ, ಇದೇ ವೇಳೆ ಭಾರತದ ಮಹಿಳಾ ತಂಡದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವಿಭಾಗದಲ್ಲಿ 7 ನೇ ಸ್ಥಾನಗಳಿಸಿದ್ದರೆ ಸ್ಮೃತಿ ಮಂದಣ್ಣ 9 ನೇ ಸ್ಥಾನದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT