India have world's best spinners to trouble England: Anil Kumble
ಚೆನ್ನೈ: ಇಂಗ್ಲೇಂಡ್ ತಂಡದ ವಿರುದ್ಧದ ಸರಣಿಗೆ ಭಾರತ ತಂಡ ಸಜ್ಜುಗೊಳ್ಳುತ್ತಿದ್ದು, ಎದುರಾಳಿ ತಂಡವನ್ನು ಮಣಿಸಲು ಭಾರತ ತಂಡದಲ್ಲಿ ಉತ್ತಮ ಸ್ಪಿನ್ನರ್ ಗಳಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಭಾರತ ತಂಡ, ಆಲ್ ರೌಂಡ್ ಅತ್ಯುತ್ತಮ ತಂಡವಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಉತ್ತಮವಾದ ಬೌಲರ್ ಗಳಿದ್ದು ಸತತವಾಗಿ 20 ವಿಕೆಟ್ ಗಳನ್ನು ಉರುಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲೂ ನುರಿತ ಬ್ಯಾಟ್ಸ್ಮನ್ ಗಳಿದ್ದಾರೆ ಎಂದು ಕುಂಬ್ಳೆ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಲಿರುವ ಬಹುತೇಕ ಆಟಗಾರರು ಕನಿಷ್ಠ 50 ಟೆಸ್ಟ್ ಗಳನ್ನಾಡಿದ್ದಾರೆ, ಆದ್ದರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವಾತಾವರಣದ ಬಗ್ಗೆ ಆಟಗಾರರಿಗೆ ಅರಿವಿರುತ್ತದೆ ಎಂದು ಕುಂಬ್ಳೆ ಹೇಳಿದ್ದಾರೆ.
ಇನ್ನು ಸಿನ್ನರ್ ಗಳ ಬಗ್ಗೆಯೂ ಅನಿಲ್ ಕುಂಬ್ಳೆ ಮಾತನಾಡಿದ್ದು, ಬೇಸಿಗೆಯ ಉತ್ತರಾರ್ಧದಲ್ಲಿ ಪಂದ್ಯವನ್ನಾಡುತ್ತಿರುವುದರಿಂದ ಭಾರತಕ್ಕೆ ಅನುಕೂಲವಾಗಲಿದೆ. ಭಾರತ ತಂಡದಲ್ಲಿ ಅತ್ಯುತ್ತಮ ಸ್ಪಿನ್ನರ್ ಗಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಪಿನ್ನರ್ ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಗೆಲ್ಲುವುದಕ್ಕೆ ಇದು ಅತ್ಯುತ್ತಮವಾದ ಅವಕಾಶ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics