ಕೆಎಲ್ ರಾಹುಲ್, ನಿಧಿ ಅಗರವಾಲ್ 
ಕ್ರಿಕೆಟ್

ನಟಿ ನಿಧಿ ಅಗರವಾಲ್ ಜತೆ ಡೇಟಿಂಗ್: ಸುದ್ದಿ ತಳ್ಳಿಹಾಕಿದ ಕೆಎಲ್ ರಾಹುಲ್

'ಮುನ್ನಾ ಮೈಕಲ್' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ನಿಧಿ ಅಗರವಾಲ್ ಜೊತೆ ಡೇಟಿಂಗ್....

ಮುಂಬೈ: 'ಮುನ್ನಾ ಮೈಕಲ್' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ನಿಧಿ ಅಗರವಾಲ್ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಟೀಂ ಇಂಡಿಯಾದ ಆರಂಭಿಕ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಅವರು ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಇತ್ತೀಚೆಗೆ ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಓಡಾಡುವಾಗ ಜನರ ಕಣ್ಣಿಗೆ ಬಿದ್ದಿದ್ದರು. ಇವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಕುರಿತು ಖಾಸಹಿ ಟಿವಿ ವಾಹಿನಿಯ ಕಾರ್ಯಕ್ರಮ 'ಓಪನ್ ಹೌಸ್ ವಿತ್ ರೆನಿಲ್'ನಲ್ಲಿ ಪ್ರತಿಕ್ರಿಯಿಸಿದ ರಾಹುಲ್, ನಾನು ಮತ್ತು ನಿಧಿ ಕಾಲೇಜ್ ದಿನಗಳಿಂದಲೂ ಸ್ನೇಹಿತರು. ನಾವು ಉತ್ತಮ ಸ್ನೇಹಿತರಷ್ಟೇ. ನಮ್ಮ ಸಂಬಂಧದ ಕುರಿತು ಎಲ್ಲಾ ವದಂತಿಗಳು ಸುಳ್ಳು ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಹೈದರಾಬಾದ್ ಮೂಲದ,  ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಾಲಿವುಡ್ ನಟಿ ನಿಧಿ ಅಗರವಾಲ್ ಜತೆ ರಾಹುಲ್ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಲ್ ರಾಹುಲ್, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದು ಹಲವು ವರ್ಷಗಳಿಂದ ಪರಸ್ಪರ ಪರಿಚಯವಿರುವ ಕಾರಣ ಭೇಟಿ ಮಾಡಿದ್ದೇವು ಎಂದು ಹೇಳಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ ರಾಹುಲ್, ಮೆಲ್ಬೋರ್ನ್ ನಲ್ಲಿ ನಡೆದ ಒಂದು ಪಂದ್ಯದಲ್ಲಿ ನಾನು ತುಂಬಾ ಕಳಪೆ ಪ್ರದರ್ಶನ ನೀಡಿದ್ದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಇದನ್ನು ಅರಿತ ಅನುಷ್ಕಾ, ನನ್ನ ರೂಮ್ ಗೆ ಬಂದು, ತನ್ನ ಹಾಗೂ ವಿರಾಟ್ ಜತೆ ಡಿನ್ನರ್ ಗೆ ಬರುವಂತೆ ಕೇಳಿಕೊಂಡರು. ಆ ದಂಪತಿ ತಮ್ಮ ಹಿಂದಿನ ಅನುಭವ ಹೇಳಿಕೊಳ್ಳುವ ಇಂತಹ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಹೇಳಿಕೊಟ್ಟರು. ಅವರು ಅದ್ಭುತ ದಂಪತಿಗಳು ಎಂದು ರಾಹುಲ್ ಹೊಗಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ- ನ್ಯೂಜಿಲೆಂಡ್ 'ಮುಕ್ತ ವ್ಯಾಪಾರ ಒಪ್ಪಂದ' ಅಂತಿಮ: ಭಾರಿ ಪ್ರಮಾಣದ ಸುಂಕ ಕಡಿತ! Video

ಬಳ್ಳಾರಿ: ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ; ವಿಡಿಯೋ ಕಾಲ್ ಲೈವ್ನಲ್ಲೇ ಆತ್ಮಹತ್ಯೆಗೆ ಶರಣಾದ ಮುನ್ನಿ!

ಕೇರಳ: ಕ್ರಿಸ್‌ಮಸ್ ಕ್ಯಾರೋಲ್ ಗುಂಪಿನ ಮೇಲೆ ದಾಳಿ ಮಾಡಿದ ವ್ಯಕ್ತಿಯ ಬಂಧನ

ಪುಟಿನ್‌ಗೆ ದೊಡ್ಡ ಹಿನ್ನಡೆ: ಮಾಸ್ಕೋ ಕಾರ್ ಬಾಂಬ್ ಸ್ಫೋಟದಲ್ಲಿ ರಷ್ಯಾದ ಜನರಲ್ ಸಾವು; ಉಕ್ರೇನ್‌ ಕೈವಾಡ ಶಂಕೆ!

ಮೌಂಟ್ ಎವರೆಸ್ಟ್ ನಲ್ಲಿ ಕಸದ ರಾಶಿ: ನೇಪಾಳ ಸರ್ಕಾರದಿಂದ 5 ವರ್ಷಗಳ ಸ್ವಚ್ಛತಾ ಯೋಜನೆ! Video

SCROLL FOR NEXT