ನವದೆಹಲಿ: ಇಂಗ್ಲೆಂಡ್ ಸರಣಿಗೆ ತಯಾರಾಗುವಾಗ ವಿರಾಟ್ ಕೊಹ್ಲಿ ಭಯಗೊಂಡಿದ್ದರು ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಸೌರವ್ ಗಂಗೂಲಿ, ಇಂಗ್ಲೆಂಡ್ ಸರಣಿಗೆ ತಯಾರಾಗುವಾಗ ವಿರಾಟ್ ಭಯಗೊಂಡಿದ್ದರು. ಆದರೆ ಉತ್ತಮವಾಗಿ ಸಿದ್ಧತೆ ನಡೆಸುವ ಭರದಲ್ಲಿ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಗೆ ತಮ್ಮ ಉತ್ಸಾಹವನ್ನು ಸೀಮಿತಗೊಳಿಸಲಿಲ್ಲ ಎಂಬ ಬಗ್ಗೆ ಸಂತಸವಿದೆ ಎಂದು ಹೇಳಿದ್ದಾರೆ.
ಕೊಹ್ಲಿ ಅತ್ಯುತ್ತಮ ಆಟಗಾರ. ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಆದರೆ ಇಂಗ್ಲೆಂಡ್ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್ ನ್ನು ಆಡಿರಲಿಲ್ಲ. ಇಂಗ್ಲೆಂಡ್ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್ ಆಡಲು ವಿರಾಟ್ ಉತ್ಸುಕರಾಗಿದ್ದರು ಎನಿಸುತ್ತದೆ. ಕಳೆದ ಬಾರಿಯ ಅನುಭವದಿಂದ ವಿರಾಟ್ ಭಯಗೊಂಡಿದ್ದರು ಎಂದು ಗಂಗೂಲಿ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಘಟನೆಯಿಂದ ವಿರಾಟ್ ಕೊಹ್ಲಿ ಹೊರಬಂದಿದ್ದಾರೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾಗಳನ್ನು ಮಣಿಸಿರುವ ಕೊಹ್ಲಿ ಈ ಬಾರಿ ಇಂಗ್ಲೆಂಡ್ ನ್ನೂ ಮಣಿಸಲು ಸಜ್ಜುಗೊಂಡಿದ್ದಾರೆ, ವಿರಾಟ್ ಕೊಹ್ಲಿ ಹಾಗೂ ಭಾರತ ತಂಡ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉತ್ತಮವಾಗಿ ಆಡಲಿದ್ದಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.