ಡಬ್ಲಿನ್: ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಡಬ್ಲಿನ್ ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ಆರಂಭಿಸಲಿದೆ. ಇನ್ನು ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್‌ಗೆ ಸ್ಥಾನವಿಲ್ಲ.
ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮನೀಷ್ ಪಾಂಡೆ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಹಾಲ್ ಆಡಲಿದ್ದಾರೆ.
ವಿಲ್ಸನ್, ಸ್ಟ್ರಲಿಂಗ್, ಶನೂನ್, ಬಾಲ್ಬಿರ್ನಿ, ಸಿಮಿ ಸಿಂಗ್, ಪೋಯ್ನರ್, ಕೆಜೆ ಒಬ್ರೇನ್, ಎಸ್ ಆರ್ ಥಾಂಪ್ಸನ್, ಡಾಕ್ರೆಲ್, ರಾಂಕಿನ್ ಮತ್ತು ಚೇಸ್ ತಂಡದಲ್ಲಿದ್ದಾರೆ.