ಎಂಎಸ್ ಧೋನಿ-ಕೇದಾರ್ ಜಾದವ್ 
ಕ್ರಿಕೆಟ್

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಧೋನಿ ಹೇಳಿದ ನಂತರ, ನನ್ನ ಆಟದ ಶೈಲಿಯೇ ಬದಲಾಯಿತು: ಜಾಧವ್

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ ನಂತರ ನನ್ನ ಆಟದ ಶೈಲಿಯೇ ಬದಲಾಯಿತು ಎಂದು ಕೇದಾರ್ ಜಾದವ್ ಹೇಳಿದ್ದಾರೆ...

ಚೆನ್ನೈ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ ನಂತರ ನನ್ನ ಆಟದ ಶೈಲಿಯೇ ಬದಲಾಯಿತು ಎಂದು ಕೇದಾರ್ ಜಾದವ್ ಹೇಳಿದ್ದಾರೆ. 
ಮಹಾರಾಷ್ಟ್ರದ ಆಟಗಾರ ಕೇದಾರ್ ಜಾದವ್ ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7.8 ಕೋಟಿ ರುಪಾಯಿಗೆ ಖರೀಸಿದೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಎಂಎಸ್ ಧೋನಿ ಹೇಳಿದ ನಂತರ ನನ್ನ ಆಟದ ಶೈಲಿಯೇ ಬದಲಾಯಿತು. ಅದಕ್ಕೂ ಮುನ್ನ ನಾನು ಭಾರತ ಪರ ಬೌಲಿಂಗ್ ಮಾಡಬಹುದು ವಿಕೆಟ್ ಪಡೆಯಬಹುದು ಎಂದು ತಿಳಿದಿರಲಿಲ್ಲ ಎಂದು ಕೇದಾರ್ ಜಾದವ್ ಹೇಳಿದ್ದಾರೆ. 
ಎಂಎಸ್ ಧೋನಿ ಅವರು ಎಲ್ಲಾ ಆಟಗಾರರನ್ನು ಬೆಂಬಲಿಸುತ್ತಾರೆ ಇದರಿಂದಾಗಿ ಪ್ರತಿಯೊಬ್ಬ ಆಟಗಾರನು ಉತ್ತಮ ಪ್ರದರ್ಶನ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಪ್ರತಿ ಆಟಗಾರನಿಂದಲೂ ಉತ್ತಮ ಪ್ರದರ್ಶನ ಹೇಗೆ ಪಡೆಯಬೇಕು ಎಂದು ಧೋನಿ ಅವರಿಗೆ ಕರಗತವಾಗಿದೆ ಎಂದು ಜಾದವ್ ಹೇಳಿದ್ದಾರೆ. 
ಚೆನ್ನೈ ಸೂಪರ್ ಕಿಂಗ್ಸ್ ಭಾಗವಾಗಲು ನಾನು ಏನು ಮಾಡಿದ್ದೇನೆ. ಆದರೆ ಧೋನಿ ಬಾಯ್ ಮತ್ತು ಈ ತಂಡದೊಂದಿಗೆ ನನ್ನ ಜೀವನದ ಅತ್ಯುತ್ತಮ ಕ್ರಿಕೆಟ್ ಅನ್ನು ಆಡಲು ನಾನು ಆಶಿಸುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ! Video

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

Toxic: ಇಂತಹ ವಿಭಿನ್ನ ಸಿನಿಮಾ ಮಾಡಲು ಗಟ್ಸ್ ಬೇಕು; ಯಶ್ ಹಾಡಿ ಹೊಗಳಿದ ಕಿಚ್ಚ ಸುದೀಪ್!

ರಕ್ಷಾ ಬಂಧನ: ವಿರಾಟ್ ಕೊಹ್ಲಿ ಸಹೋದರಿಯ ಪೋಸ್ಟ್; ಫೋಟೋ ವೈರಲ್!

ವಧುವಿಗೆ ತಾಳಿ ಕಟ್ಟಿದ TRS ನಾಯಕಿ ಕವಿತಾ! ಏನಿದು ವಿಚಿತ್ರ ಸಂಪ್ರದಾಯ? Video ನೋಡಿ