ವಿರಾಟ್ ಕೊಹ್ಲಿ-ಚೇತೇಶ್ವರ ಪೂಜಾರ
ಕೋಲ್ಕತ್ತಾ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮೂರು ಮಾದರಿಗಳಲ್ಲೂ ಅತ್ತುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಂತೆ ಟೆಸ್ಟ್ ನಲ್ಲಿ ಕೊಹ್ಲಿಯಂತೆ ಚೇತೇಶ್ವರ ಪೂಜಾರ ಸಹ ಉತ್ತಮ ಆಟಗಾರ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಚೇತೇಶ್ವರ ಪೂಜಾರ ಅತ್ಯುತ್ತಮವಾಗಿ ಆಡಿದ್ದಾರೆ. ಅವರು ಆಡಿರುವ 57 ಟೆಸ್ಟ್ ಪಂದ್ಯಗಳ ಪೈಕಿ 14 ಶತಕಗಳನ್ನು ಸಿಡಿಸಿದ್ದಾರೆ. ಆದರೆ ಅವನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಎ ಸೆಂಚೂರಿ ಇಸ್ ನಾಟ್ ಎನಾಫ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಸಾಧನೆ ಇತರರಿಗಿಂತ ಉತ್ತಮವಾಗಿದೆ. ಆದರೆ ಚೇತೇಶ್ವರ ಪೂಜಾರ ಸಹ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ ಎಂದರು.
ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕ ಒಂದು ರೀತಿಯ ಭದ್ರಕೋಟೆ ಇದ್ದಂತೆ. ಅಲ್ಲಿ ಉತ್ತಮವಾಗಿ ಆಡಿದರೆ ತಂಡ ಉತ್ತಮ ರನ್ ಪೇರಿಸಬಹುದು. ಅದರಂತೆ ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಸಹ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅದೇ ರೀತಿ ಪೂಜಾರ ಸಹ ಮೂರನೇ ಕ್ರಮಾಂಕದಲ್ಲಿ ಆಡಿದ್ದು ತಂಡ ಉತ್ತಮ ರನ್ ದಾಖಲಿಸಲು ಆಸರೆಯಾಗಿದ್ದಾರೆ. ವಿರಾಟ್ ಕೊಹ್ಲಿಯಂತೆ ಟೆಸ್ಟ್ ತಂಡಕ್ಕೆ ಚೇತೇಶ್ವರ ಪೂಜಾರರ ಉಪಸ್ಥಿತಿ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.