ಅಸ್ಘರ್ ಸ್ಟಾನಿಕ್ ಝೈ 
ಕ್ರಿಕೆಟ್

ವಿಶ್ವಕಪ್ ಅರ್ಹತೆಗಾಗಿ ಅಪೆಂಡಿಕ್ಸ್ ಆಪರೇಷನ್ ನೋವಲ್ಲು ಕ್ರಿಕೆಟ್ ಆಡಿದ ಆಫ್ಗಾನ್ ನಾಯಕ!

ಕ್ರಿಕೆಟ್ ಮೇಲಿನ ಪ್ರೀತಿ ಹಾಗೂ ತಂಡವನ್ನು ವಿಶ್ವಕಪ್ ಟೂರ್ನಿಗೆ ಕೊಂಡೊಯ್ಯಬೇಕು ಎಂಬ ತುಡಿತ ಆಫ್ಗಾನಿಸ್ತಾನ್ ತಂಡದ ನಾಯಕ ಅಸ್ಘರ್ ಸ್ಟಾನಿಕ್ ಝೈ...

ಹರಾರೆ: ಕ್ರಿಕೆಟ್ ಮೇಲಿನ ಪ್ರೀತಿ ಹಾಗೂ ತಂಡವನ್ನು ವಿಶ್ವಕಪ್ ಟೂರ್ನಿಗೆ ಕೊಂಡೊಯ್ಯಬೇಕು ಎಂಬ ತುಡಿತ ಆಫ್ಗಾನಿಸ್ತಾನ್ ತಂಡದ ನಾಯಕ ಅಸ್ಘರ್ ಸ್ಟಾನಿಕ್ ಝೈ ಅಪೆಂಡಿಕ್ಸ್ ಆಪರೇಷನ್ ನೋವಲ್ಲು ತಂಡವನ್ನು ಮುನ್ನಡೆಸಿ ತಂಡವನ್ನು ಗೆಲ್ಲಿಸಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ವಿಶ್ವಕಪ್ ಅರ್ಹತಾ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಆಫ್ಗಾನಿಸ್ತಾನ ಫೈನಲ್ ತಲುಪಿ 2019ರ ವಿಶ್ವಕಪ್ ಗೆ ಅರ್ಹತೆ ಗಿಟ್ಟಿಸಿದೆ. 
ಅಸ್ಘರ್ ಕೇವಲ ಎರಡು ವಾರಗಳ ಹಿಂದಷ್ಟೇ ಅಪೆಂಡಿಕ್ಸ್ ಆಪರೇಷನ್ ಗೆ ಒಳಗಾಗಿದ್ದರು. ಮೊದಲು ವಿಶ್ವಕಪ್ ಅರ್ಹತಾ ಟೂರ್ನಿಯಿಂದ ಹಿಂದೆ ಸರಿದಿದ್ದು ಯುವ ಸ್ಪಿನ್ನರ್ ರಶೀದ್ ಖಾನ್ ಗೆ ನಾಯಕತ್ವ ನೀಡಲಾಗಿತ್ತು. 
ಆದರೆ ಐರ್ಲೆಂಡ್ ವಿರುದ್ಧದ ಕೊನೆಯ ಸೂಪರ್ ಸಿಕ್ಸ್ ಪಂದ್ಯ ವಿಶ್ವಕಪ್ ಗೆ ಅರ್ಹತೆ ಗಿಟ್ಟಿಸಲು ಮಹತ್ವದ ಪಂದ್ಯವಾಗಿದ್ದರಿಂದ ಆಸ್ಘರ್ ಸಂಪೂರ್ಣ ಫಿಟ್ ಇಲ್ಲದಿದ್ದರೂ ತಂಡವನ್ನು ವಿಶ್ವಕಪ್ ನಲ್ಲಿ ಆಡಿಸಬೇಕು ಎಂಬ ಒಂದೇ ಕಾರಣಕ್ಕೆ ತಂಡ ಸೇರಿಕೊಂಡಿದ ಅವರು ಕೊನೆಗೂ ಅದ್ಭುತವಾಗಿ ಆಡು ವ ಮೂಲಕ ವಿಶ್ವಕಪ್ ನನಸನ್ನು ನನಸಾಗಿಸಿಕೊಂಡರು. 
210 ರನ್ ಗಳ ಗುರಿ ಬೆನ್ನತ್ತಿದ ಅಫ್ಘಾನ್ ನಾಯಕ ಅಸ್ಘರ್ ಸ್ಟಾನಿಕ್ ಝೈ(ಔಟಾಗದೆ 39) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 49.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 213ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು. ಮೂಲಕ ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ನಡೆಯುವ ವಿಶ್ವಕಪ್ ಗೆ 10ನೇ ತಂಡವಾಗಿ ಸ್ಥಾನ ಪಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

SCROLL FOR NEXT