ಕ್ರಿಕೆಟ್

ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂ ನಲ್ಲಿ ವಿರಾಟ್‌ ಕೊಹ್ಲಿ ಮೇಣದ ಪ್ರತಿಮೆ

Lingaraj Badiger
ನವದೆಹಲಿ: ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆ ಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ಶೀಘ್ರ ಅನಾವರಣಗೊಳ್ಳಲಿದೆ.
ಇಂದು ಲಂಡನ್ ನಿಂದ ದೆಹಲಿ ಆಗಮಿಸಿರುವ ವಿಶ್ವ ಪ್ರಸಿದ್ಧ ಕಲಾವಿದರನ್ನು ಒಳಗೊಂಡ ತಂಡ ಕೊಹ್ಲಿ ಅವರನ್ನು ಭೇಟಿ ಮಾಡಿ ಅವರ ದೇಹದ ಎಲ್ಲಾ ಅಂಗಗಳ ಅಳತೆ ತೆಗೆದುಕೊಂಡಿದೆ.
ಈಗಗಾಲೇ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಕ್ರಿಕೆಟ್‌ ದಿಗ್ಗಜರಾದ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌, ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೇಣದ ಪ್ರತಿಮೆಗಳಿದ್ದು, ವಿರಾಟ್ ಕೊಹ್ಲಿ ಪ್ರತಿಮೆ ಕೂಡ ಸೇರ್ಪಡೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಸಿದ ವಿರಾಟ್ ಕೊಹ್ಲಿ ಪ್ರತಿಷ್ಠಿತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಮೇಡಮ್‌ ಟುಸ್ಸಾಡ್ಸ್ ನಲ್ಲಿ ಇನ್ನು ಮುಂದೆ ನನ್ನ ಪ್ರತಿಮೆಯೂ ಇರಲಿದೆ ಎಂಬುದು ಖುಷಿಯ ವಿಷಯ. ಇದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ. ಇದಕ್ಕಾಗಿ ಟುಸ್ಸಾಡ್ಸ್‌ ತಂಡಕ್ಕೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.
2006ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಗೆದ್ದು ಭಾರತ ತಂಡದ ನಾಯಕರಾಗಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಅವರು ಅರ್ಜುನ, ಐಸಿಸಿ ವಿಶ್ವದ ಶ್ರೇಷ್ಠ ಕ್ರಿಕೆಟಿಗ, ಬಿಸಿಸಿಐನಿಂದ ನೀಡುವ ವರ್ಷದ ಶ್ರೇಷ್ಠ ಆಟಗಾರ ಮತ್ತು ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
SCROLL FOR NEXT