ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತ ವನಿತೆಯರು 
ಕ್ರಿಕೆಟ್

ಮಹಿಳೆಯರ ಟಿ20 ತ್ರಿಕೋನ ಸರಣಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ಟಿ20 ತ್ರಿಕೋನ ಸರಣಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳೆಯರ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಬರ್ಜರಿ ಜಯ ಸಾದಿಸಿದೆ.

ಮುಂಬೈ: ಟಿ20 ತ್ರಿಕೋನ ಸರಣಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳೆಯರ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಬರ್ಜರಿ ಜಯ ಸಾದಿಸಿದೆ.
ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 108 ರನ್ ಗಳ ಗುರಿಯನ್ನು ಭಾರತ ಕೇವಲ 2 ವಿಕೆಟ್ ನಷ್ಟಕ್ಕೆ 15.4 ಓವರ್ ನಲ್ಲಿಯೇ ಗಳಿಸಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರ ತಂಡ ಭಾರತದ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿ 18.5 ಓವರ್ ನಲ್ಲಿ 107 ರನ್ ಗಳಿಗೆ ಆಲೌಟ್ ಆದರು. ಇಂಗ್ಲೆಂಡ್ ಪರ ಆರಂಭಿಕ ಆಟಗಾರ್ತಿ ಡೇನಿಯಲ್ಲೇ ವ್ಯಾಟ್ ಗಳಿಸಿದ 31 ರನ್ ಗಳ ಗರಿಷ್ಟ ವೈಯುಕ್ತಿಕ ರನ್ ಗಳಿಕೆಯಾಗಿತ್ತು. ಭಾರತದ ಪರ ಅನುಜಾ ಪಾಟಿಲ್ 3 ವಿಕೆಟ್ ಕಬಳಿಸಿ ಯಶಸ್ವೀ ಬೌಲರ್ ಎನಿಸಿಕೊಂಡರೆ, ರಾಧಾ ಯಾದವ್, ದೀಪ್ತಿ ಶರ್ಮಾ ಮತ್ತು ಪೂನಂ ಯಾದವ್ ತಲಾ 2 ವಿಕೆಟ್ ಗಳಿಸಿದರು.
ಇನ್ನು ಇಂಗ್ಲೆಂಡ್ ನೀಡಿದ 108 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಬೆನ್ನೆಲುಬಾಗಿ ನಿಂತರು. ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ಇಂಗ್ಲೆಂಡ್ ನೀಡಿದ ಗುರಿ ಭಾರತಕ್ಕೆ ಸಾವಾಲಾಗಿ ಪರಿಣಮಿಸಲೇ ಇಲ್ಲ. ಮಿಥಾಲಿ ರಾಜ್ 6 ರನ್ ಗಳಿಗೆ ನಿರ್ಗಮಿಸಿದರು. ಬಳಿಕ ಬಂದ ರೋಡ್ರಿಗ್ಸ್ ಕೂಡ 7 ರನ್ ಗಳಿಸಿ ಔಟ್ ಆದರು. ಈ ವೇಳೆ ಭಾರತಕ್ಕೆ ಕೊಂಚ ಹಿನ್ನಡೆಯಾಯಿತಾದರೂ, ಮಂದಾನಾ ಜೊತೆಗೂಡಿದ ಹರ್ಮನ್ ಪ್ರೀತ್ ಕೌರ್ ಉತ್ತಮ ಸಾಥ್ ನೀಡಿದರು.
ಅಜೇಯ ಆಟವಾಡಿದ ಇಬ್ಬರೂ ಭಾರತಕ್ಕೆ 8 ವಿಕೆಟ್ ಗಳ ಜಯ ತಂದಿತ್ತರು. ಹರ್ಮನ್ ಪ್ರೀತ್ ಕೌರ್ ಅಜೇಯ 20 ರನ್ ಗಳಿಸಿದರೆ, ಸ್ಮೃತಿ ಮಂದಾನಾ ಅಜೇಯ 62 ರನ್ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಕರ್ನಾಟಕದ ಇತಿಹಾಸದಲ್ಲೇ ಮೊದಲು: ಪ್ರತಿಭಟಿಸುವುದಾದರೆ ಸದನದ ಬಾವಿಗೆ ಬನ್ನಿ; ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ; ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ; Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!