ಕೋಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಆಟಗಾರ ರವೀಂದ್ರ ಜಡೇಜಾ ಸತತ ಎರಡು ಕ್ಯಾಚ್ ಗಳನ್ನು ಕೈಚೆಲ್ಲಿದ್ದು ಇದಕ್ಕೆ ಟ್ವೀಟರಿಗರು ಜಡೇಜಾರ ಕಾಲೆಳೆದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 5 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತ್ತು. 178 ರನ್ ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ಪರ ಸುನೀಲ್ ನರೈನ್ ಆರಂಭದಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದರು ಈ ವೇಳೆ ನರೈನ್ ಸಿಡಿಸಿದ ಎರಡು ಕ್ಯಾಚ್ ಗಳನ್ನು ರವೀಂದ್ರ ಜಡೇಜಾ ಕೈಚೆಲ್ಲಿದ್ದರು. ನಂತರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನರೈನ್ 20 ಎಸತೆಗಳಲ್ಲಿ 34 ರನ್ ಬಾರಿಸಿ ಔಟಾದರು.
ಒಟ್ಟಿನಲ್ಲಿ ಚೆನ್ನೈ ತಂಡ ಕೋಲ್ಕತ್ತಾ ವಿರುದ್ಧ 6 ವಿಕೆಟ್ ಗಳಿಂದ ಜಯಗಳಿಸಿತ್ತು. ಇನ್ನು ಅತ್ಯುತ್ತಮ ಆಲ್ರೌಂಡರ್ ಎನಿಸಿಕೊಂಡಿರುವ ರವೀಂದ್ರ ಜಡೇಜಾ ಅವರು ಕ್ಯಾಚ್ ಗಳನ್ನು ಕೈಚೆಲ್ಲಿದ್ದು ಪಂದ್ಯ ಸೋಲಲು ಕಾರಣವಾಗಿದ್ದು ಈ ಕುರಿತು ಟ್ವೀಟರಿಗರು ತಮಾಷೆಯ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics