ಕೋಲ್ಕತ್ತಾ: ಚೆನ್ನೈ ಸೂಪಕ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಡಿಸಿಷನ್ ರಿವ್ಯೂ ಸಿಸ್ಟಮ್ ನಲ್ಲಿ ಯಶಸ್ಸು ಪಡೆದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅಪೀಲ್ ಮಾಡಿದಾಗ ಅದು ಅಂಪೈರ್ ನಾಟೌಟ್ ನೀಡಿದರೂ ಡಿಆರ್ಎಸ್ ಮೂಲಕ ಶೇಖಡ 90ರಷ್ಟು ಬಾರಿ ಔಟಾಗಿದ್ದಾರೆ. ಇದು ಅಕ್ಷರಶಃ ಮತ್ತೆ ನಿಜವಾಗಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ 11ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಇಂತಹದೊಂದು ಘಟನೆ ನಡೆಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 178 ರನ್ ಗಳ ಗುರಿ ಬೆನ್ನಟ್ಟುತ್ತಿದ್ದ ಕೆಕೆಆರ್ ತಂಡದ ಪರ ಆಡುತ್ತಿದ್ದ ಕ್ರಿಸ್ ಲೀನ್ ಚೆನ್ನೈ ತಂಡದ ಬೌಲರ್ ಲುಂಗಿ ಎನ್ಗಿಡಿ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿದ್ದ ಶೇನ್ ವಾಟ್ಸನ್ ಗೆ ಕ್ಯಾಚ್ ನೀಡಿದರು. ಈ ಹಂತದಲ್ಲಿ ಅಂಪೈರ್ ನಾಟೌಟ್ ತೀರ್ಪು ನೀಡಿದರು. ಈ ತೀರ್ಪಿಗೆ ವಿರುದ್ಧ ಧೋನಿ ಡಿಆರ್ಎಸ್ ಗೆ ಅಪೀಲ್ ಮಾಡಿದರು. ಇದರಲ್ಲಿ ಔಟ್ ಎಂದು ತೀರ್ಪು ಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics