ಪುಣೆ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸತತ ಗೆಲುವಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿತ್ತು. 180 ರನ್ ಗುರಿ ಬೆನ್ನಟ್ಟಿದ ಚೆನ್ನೈ ಇನ್ನು ಆರು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.
ಹೈದರಾಬಾದ್ ಪರ ಶಿಖರ್ ಧವನ್ 79, ಕೇನ್ ವಿಲಿಯಮ್ಸನ್ 51 ಮತ್ತು ಹೂಡಾ 21 ರನ್ ಗಳಿಸಿದ್ದಾರೆ.
ಚೆನ್ನೈ ಪರ ಶೇನ್ ವಾಟ್ಸನ್ 57, ಅಂಬಟ್ಟಿ ರಾಯುಡು ಅಜೇಯ 100 ಮತ್ತು ಎಂಎಸ್ ಧೋನಿ 20 ರನ್ ಗಳಿಸಿದ್ದಾರೆ.