ಕ್ರಿಕೆಟ್

ಭಾರತೀಯ ಸ್ಪಿನ್ನರ್‌ಗಳು ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಸಾಧನೆ ಮಾಡಬಹುದು: ಗ್ರೇಮ್ ಸ್ವಾನ್

Vishwanath S
ಮುಂಬೈ: ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಸ್ಪಿನ್ನರ್‌ಗಳು ಉತ್ತಮ ಸಾಧನೆ ಮಾಡಬಹುದು ಎಂದು ಇಂಗ್ಲೆಂಡ್ ನ ಮಾಜಿ ಆಫ್ ಸ್ಪಿನ್ನರ್‌ ಗ್ರೇಮ್ ಸ್ವಾನ್ ಹೇಳಿದ್ದಾರೆ. 
ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಸ್ಪಿನ್ನರ್ ಗಳನ್ನು ಎದುರಿಸಲು ತಡಕಾಡುತ್ತಾರೆ. ಹೀಗಾಗಿ ಇದರ ಲಾಭವನ್ನು ಭಾರತೀಯ ಸ್ಪಿನ್ನರ್ ಗಳು ಬಳಸಿಕೊಳ್ಳಬಹುದು ಎಂಬ ಗ್ರೇಮ್ ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ. 
2018ರ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್, ಮೂರು ಏಕದಿನ ಪಂದ್ಯ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.
ಕಳೆದ ವರ್ಷ ಪಾಕಿಸ್ತಾನದ ಸ್ಪಿನ್ನರ್ ಯಾಸೀರ್ ಶಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಸಾಮಾನ್ಯವಾಗಿ ಮುಂದೆ ಬಂದು ಆಡುವುದರಿಂದ ಅವರು ಸ್ಪಿನ್ನರ್ ಗಳನ್ನು ಎದುರಿಸಲು ತಡಕಾಡುತ್ತಾರೆ. ಹೀಗಾಗಿಯೇ ಕಳೆದ ವರ್ಷ ಯಾಸೀರ್ ಶಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು ಎಂದು ಹೇಳಿದ್ದಾರೆ. 
ಇದೇ ರೀತಿ ಭಾರತೀಯ ಸ್ಪಿನ್ನರ್ ಗಳಾದ ಯಜುವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್ ಇಂಗ್ಲೆಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
SCROLL FOR NEXT